ಹೊಳೆನರಸೀಪುರ: ‘ಸರ್ಕಾರ ಅನೇಕ ವರ್ಷಗಳಿಂದ ಗುತ್ತಿಗೆ ಆದಾರದಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ ಎಲ್ಲಾ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು. ಪೌರಕಾರ್ಮಿಕರ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಬೇಕು’ ಎಂದು ಶಾಸಕ ಎಚ್.ಡಿ. ರೇವಣ್ಣ ಸರ್ಕಾರವನ್ನು ಒತ್ತಾಯಿಸಿದರು.

ಬುಧವಾರ ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ನಾನು
ಅಧಿಕಾರದಲ್ಲಿದ್ದಾಗ ಅನೇಕ ಪಟ್ಟಣಗಳನ್ನು ನೋಡಿದ್ದೇನೆ. ಹೊಳೆನರಸೀಪುರದ ಪೌರಕಾರ್ಮಿಕರು ಎಲ್ಲರೂ ಎದ್ದೇಳುವ ಮುನ್ನ ಇಡೀ ಪಟ್ಟಣವನ್ನು ಶುಚಿಗೊಳಿಸಿರುತ್ತಾರೆ. ಇವರ ಸೇವೆ ಶ್ಲಾಘನೀಯ. ನಾನು ವಸತಿ ಸಚಿವನಾಗಿದ್ದಾಗ ಇಲ್ಲಿನ ಪುರಸಭೆಯ 46 ಪೌರಕಾರ್ಮಿಕರಿಗೆ ನಿವೇಶನಗಳನ್ನು ನೀಡಿ ಮನೆಕಟ್ಟಿಕೊಳ್ಳಲು ಸಹಾಯ ಮಾಡಿದ್ದೇನೆ. ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಪೌರಕಾರ್ಮಿಕರಿಗೆ ನಿವೇಶನ ನೀಡುವಂತಾಗಬೇಕು’ ಎಂದರು.

ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ, ಎಲ್ಲಾ ಪೌರಕಾರ್ಮಿಕರಿಗೆ 4 ತಟ್ಟೆ, 4 ಲೋಟ, 4 ಬಟ್ಟಲು, ವಿವಿಧ ಸೈಜಿನ 4 ಸೌಟುಗಳಿರುವ ಕಿಟ್ಗಳನ್ನು ನೀಡಿ ಗೌರವಿಸಿದರು.

ಎಸ್ಎಸ್ಎಲ್ಸಿಯಲ್ಲಿ ಅತಿಹೆಚ್ಚು ಅಂಕಪಡೆದ ಇಬ್ಬರು ಪೌರಕಾರ್ಮಿಕರ ಮಕ್ಕಳನ್ನು ಗೌರವಿಸಿದರು. ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ, ಮುಖ್ಯಾಧಿಕಾರಿ ಶಿವಶಂಕರ್, ಮಾಜಿ ಪುರಸಭಾಧ್ಯಕ್ಷರಾದ ಜಿ.ಕೆ.ಸುದಾನಳಿನಿ ಹಾಗೂ ಜ್ಯೋತಿ, ಸದಸ್ಯರಾದ ಎ.ಜಗನ್ನಾಥ್, ಸೈಯದ್ ವಾಸಿಂ, ಎಚ್.ಟಿ.ಕುಮಾರಸ್ವಾಮಿ, ನಾಗಮಣಿ, ನಿಂಗಯ್ಯ, ಮಧು, ಉಮೇಶ್, ನಾಮ ನಿರ್ದೇಶನ ಸದಸ್ಯರಾದ ಉದಯ್ ಕುಮಾರ್ ಹಾಗೂ ಎಸ್.ಎನ್.ಸುನಿತಾ, ಕಂದಾಯಾಧಿಕಾರಿ ಸಿ.ಡಿ.ನಾಗೇಂದ್ರ, ಪಂಕಜಾ, ಪರಿಸರ ಎಂಜಿನಿಯರ್ ರುಚಿದರ್ಶಿನಿ, ಆರೋಗ್ಯಾಧಿಕಾರಿ ವಸಂತ್ ಕುಮಾರ್, ಮೇಸ್ತ್ರಿ ಮಾದಯ್ಯ, ನಾಗಮ್ಮ, ಚಲುವ, ಕಿರಣ, ಕರ ವಸೂಲಿಗಾರರಾದ ಅಬ್ಬಾಸ್, ಸುನೀಲ್, ಹುಸೇನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.