ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು: ಮೊಸಳೆ ಪ್ರತ್ಯಕ್ಷ, ಆತಂಕ ಸೃಷ್ಟಿ

Last Updated 1 ಡಿಸೆಂಬರ್ 2021, 7:05 IST
ಅಕ್ಷರ ಗಾತ್ರ

ಆಲೂರು: ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ಭರತೂರು ಗ್ರಾಮದ ಬಳಿ ಹೇಮಾವತಿ ಜಲಾಶಯ ಹಿನ್ನೀರಿನಲ್ಲಿ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಈ ವರ್ಷ ವಿಪರೀತ ಸುರಿದ ಮಳೆಯಿಂದಾಗಿ ಹೇಮಾವತಿ ಜಲಾಶಯಕ್ಕೆ ಹೆಚ್ಚುವರಿ ನೀರು ಹರಿದು ಬಂದಿದ್ದರಿಂದ ಹಿನ್ನೀರು ಪ್ರದೇಶ ವಿಸ್ತಾರಗೊಂಡಿದೆ. ಅಚ್ಚುಕಟ್ಟು ಪ್ರದೇಶದಲ್ಲಿದ್ದ ಮೊಸಳೆಯನ್ನು ಮಂಗಳವಾರ ಜನರು ನೋಡಿದ್ದಾರೆ.

ಜಲಾಶಯ ಹಿನ್ನೀರು ಅವೃತದಲ್ಲಿ ಭರತೂರು ಗ್ರಾಮದ ಸಮೀಪದಲ್ಲಿರುವ ಇತಿಹಾಸ ಪ್ರಸಿದ್ಧ ಅಡಿಬೈಲು ರಂಗನಾಥ ಸ್ವಾಮಿ ದೇವರ ದರ್ಶನಕ್ಕೆ ಬರುವ ಭಕ್ತರಲ್ಲಿ ಭಯ ಹುಟ್ಟಿಸಿದೆ. ಅಲ್ಲದೆ ಜಲಾಶಯದ ಹಿನ್ನೀರು ಗ್ರಾಮಗಳ ಜನ-ಜಾನುವಾರುಗಳು ನದಿತೀರಕ್ಕೆ ತೆರಳುವ ಆತಂಕಪಡುವಚಿತಾಗಿದೆ. ಈವರೆಗೂ ಯಾವುದೆ ಜೀವಹಾನಿ ಸಂಭವಿಸಿಲ್ಲವಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಮನಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT