ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ನಿವೇಶನ ಹಂಚಿಕೆ ವಿಳಂಬ: ಆಕ್ರೋಶ

ಪೊಲೀಸ್‌ ಗೃಹ ನಿರ್ಮಾಣ ಸಂಘಧ ವಿರುದ್ಧ ಹೋರಾಟದ ಎಚ್ಚರಿಕೆ
Last Updated 15 ಜನವರಿ 2022, 8:42 IST
ಅಕ್ಷರ ಗಾತ್ರ

ಹಾಸನ: ನಗರದ ಸತ್ಯಮಂಗಲ ಬಳಿಯ ಪೊಲೀಸ್‌ ಅಧಿಕಾರಿಗಳ ಮತ್ತು ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತದಿಂದ ನಿವೇಶನ ಹಂಚಲುಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ನಿವೇಶನದಾರರು ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ರಾತ್ರಿ ಸಂಘದ ಆವರಣದಲ್ಲಿ ಜಮಾಯಿಸಿದ್ದ ಮಹಿಳೆಯರುಸೇರಿದಂತೆ ನೂರಾರು ಮಂದಿ, ಕೂಡಲೇ ನಿವೇಶನ ನೀಡಬೇಕು ಎಂದುಆಗ್ರಹಿಸಿ, ಪ್ರತಿಭಟನೆ ನಡೆಸಿದರು.

ಪೊಲೀಸ್‌ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಆರು ವರ್ಷಗಳ ಹಿಂದೆಯೇ ಹಣ ಕಟ್ಟಿಸಿಕೊಂಡಿದ್ದಾರೆ. ಆದರೆ ಈವರೆಗೂ ನಿವೇಶನನೀಡಿಲ್ಲ. ಇನ್ನು ಮುಂದೆ ಸಬೂಬು ಹೇಳದೆ ಕೂಡಲೇ ನಿವೇಶನ ಹಂಚಿಕೆಮಾಡಬೇಕು ಎಂದು ಪಟ್ಟು ಹಿಡಿದರು.

ಆರಂಭದಲ್ಲಿ ಸೊಸೈಟಿ ಮೂಲಕ ಹಣ ಕಟ್ಟಿಸಿಕೊಳ್ಳಲಾಯಿತು. ಒಂದು ಚದರಅಡಿಗೆ ₹666 ನಿಗದಿಯಾಗಿತ್ತು. ನಂತರ ₹725ಕ್ಕೆ ಏರಿಕೆ ಮಾಡಲಾಯಿತು. ಈಗ ಹೆಚ್ಚುವರಿಯಾಗಿ ₹145 ಸೇರಿ ಹಣ ಕಟ್ಟಬೇಕು ಎನ್ನುತ್ತಿದ್ದಾರೆ.
ಹೆಲಿಪ್ಯಾಡ್‌ ನಿರ್ಮಾಣ, ಇಂಟರ್‌ನೆಟ್‌ ಸೇರಿದಂತೆ ಹೈಟೆಕ್‌ ಸೌಲಭ್ಯನೀಡುವುದಾಗಿ ಹೇಳುತ್ತಿದ್ದಾರೆ. ಅದಾವುದೂ ಬೇಡ, ಮೊದಲ ನಿವೇಶನನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ನಿವೇಶನ ಆಕಾಂಕ್ಷಿ ಯತೀಂದ್ರ, ‘ವರ್ಷದಿಂದ ವರ್ಷಕ್ಕೆನಿವೇಶನ ಬೆಲೆ ಹೆಚ್ಚಳ ಮಾಡಲಾಗುತ್ತಿದೆಯೇ ಹೊರತು ನಿವೇಶನ ನೀಡಿಲ್ಲ. ಕಾಲಹರಣ ಮಾಡುತ್ತಿದ್ದಾರೆ. ಹಣ ಹೆಚ್ಚಳ ಮಾಡುವ ಕುರಿತು ನೋಟಿಸ್ ನೀಡಿಲ್ಲ.ಆರಂಭದಲ್ಲಿ ವರ್ಷದಲ್ಲಿ ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ ಮಾಡುತ್ತೇವೆ ಎಂದು ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಕಿಡಿಕಾರಿದರು.

‘ಯಾವುದೇ ಕಾರಣಕ್ಕೂ ಹೆಚ್ಚುವರಿ ಹಣ ನೀಡುವುದಿಲ್ಲ. ಸೊಸೈಟಿ ಸದಸ್ಯರುನೀಡಿದ ಭರವಸೆಯಂತೆ ಸೈಟ್‌ ವಿತರಿಸಬೇಕು. ಇಲ್ಲವಾದರೆ ಕಾನೂನುಹೋರಾಟಕ್ಕೆ ಸಿದ್ಧ’ ಎಂದು ಎಚ್ಚರಿಸಿದರು.

ಚನ್ನಂಗಿಹಳ್ಳಿ ರೇಖಾ ಮಾತನಾಡಿ, ‘ಸೊಪ್ಪು ಮಾರಾಟ ಮಾಡಿ ಜೀವನಸಾಗಿಸುತ್ತಿರುವ ನಾನು, ಚಿನ್ನಾಭರಣ ಮಾರಿ ಮಕ್ಕಳಿಗೆ ಒಳ್ಳೆಯದಾಗಲಿ ಎಂದುಹಣ ಕಟ್ಟಿದ್ದೇನೆ. ಮತ್ತೆ ಹಣ ಪಾವತಿಸಿವೆಂದರೆ ಎಲ್ಲಿಂದ ತರುವುದು’ ಎಂದು ಪ್ರಶ್ನಿಸಿದರು.

ಸೊಸೈಟಿ ಅಧ್ಯಕ್ಷ ಪ್ರಕಾಶ್‌ ಗೌಡ, ಉಪಾಧ್ಯಕ್ಷ ಶ್ರೀಧರ್ ಎಚ್.ಪಿ ಅವರು ಡೆವಲಪರ್ಸ್‌ ಜತೆ ಮಾತನಾಡುವುದಾಗಿ ಹೇಳಿ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT