ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರಿಗೆ ಕಾಂಗ್ರೆಸ್‌ ಮೇಲೆ ಒಲವು: ಆರ್.ಅಶೋಕ್

Last Updated 27 ಏಪ್ರಿಲ್ 2022, 16:31 IST
ಅಕ್ಷರ ಗಾತ್ರ

ಹಾಸನ: ‘ಕಾಂಗ್ರೆಸ್– ಜೆಡಿಎಸ್ ಅಣ್ಣ ತಮ್ಮಂದಿರಂತೆ. ನಾವು ಎ ಟೀಂ, ಬಿ ಟೀಂಮಾತು ಕೇಳಲ್ಲ’ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

‘ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರಿಬ್ಬರೂ ಹೊಂದಾಣಿಕೆಮಾಡಿಕೊಂಡಿದ್ದರು. ಧರ್ಮಸಿಂಗ್ ಇದ್ದಾಗ, ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ರು? ನಮ್ಮ ಜೊತೆ ಒಂದೇ ಸಲ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿತ್ತು. ಉಳಿದ ಸಂದರ್ಭದಲ್ಲಿಅವರಿಬ್ಬರೇ ಜೊತೆಯಾಗಿದ್ದರು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿನಡೆಸಿದರು.

‘ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ಕಾಂಗ್ರೆಸ್ ಜೊತೆ ಹೊಂದಾಣಿಕೆಮಾಡಿಕೊಂಡಿದ್ದರು. ಈಗಲೂ ಅವರಿಗೆ ಕಾಂಗ್ರೆಸ್ ಮೇಲೆಯೇ ಒಲವಿದೆ. ಹತ್ತುಸಲ ಹೊಂದಾಣಿಕೆ ಮಾಡಿಕೊಂಡು, ಈಗ ನಮ್ಮ ಜೊತೆ ಅಂದ್ರೆ ಹೇಗೆ’ ಎಂದು ಪ್ರಶ್ನಿಸಿದರು.

ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರುವ ಕುರಿತು ಪ‍್ರತಿಕ್ರಿಯಿಸಿ, ‘ಅವರೊಬ್ಬರೇ ಅಲ್ಲ, ಬಹಳ ಜನ ಈ ತಿಂಗಳಾಂತ್ಯಕ್ಕೆ ಬಿಜೆಪಿಗೆಸೇರ್ಪಡೆಯಾಗುತ್ತಾರೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ರೀತಿಯಲ್ಲೇ ರಾಜ್ಯದಲ್ಲೂ ಜಯಗಳಿಸುವ ಬಗ್ಗೆ ಈಗಾಗಲೇಹೈಕಮಾಂಡ್ ನೀಲನಕ್ಷೆ ಸಿದ್ಧಪಡಿಸಿದೆ’ ಎಂದರು.

‘ಸಾರಿಗೆ ಸಚಿವನಾಗಿದ್ದಾಗ ರಾಜ್ಯದ ಎಲ್ಲಾ ಹೆದ್ದಾರಿಗಳಲ್ಲಿ ಟ್ರಕ್ ಟರ್ಮಿನಲ್ಮಾಡಲು ಆದೇಶ ಹೊರಡಿಸಿದ್ದೆ. ಲಾರಿ ಚಾಲಕರು ಮಧ್ಯ ರಾತ್ರಿ ಲಾರಿ ಅಡಿಯಲ್ಲಿ ಮಲಗಿ ಜೀವ ಕಳೆದುಕೊಳ್ಳುವ ಸ್ಥಿತಿ ಇದೆ. ಅವರೂ ಮನುಷ್ಯರು, ಅವರಿಗೆ ಒಂದು ವ್ಯವಸ್ಥೆ ಕಲ್ಪಿಸಿದ್ದೇವೆ’ ಎಂದು ತಿಳಿಸಿದರು.

‘ಜಿಲ್ಲೆಯ 56 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆಮಾಡಿದ್ದೇವೆ. ಹಾಸನ ಜಿಲ್ಲಾಧಿಕಾರಿ ಕಟ್ಟಡ ಪಾರಂಪರಿಕ ಕಟ್ಟಡ ಅಲ್ಲ. ಅದುಹಳೆಯದಾಗಿದ್ದರಿಂದ ಹೊಸ ಸಂಕೀರ್ಣ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಈ ವಿಚಾರದಲ್ಲಿ ಜೆಡಿಎಸ್‍ನವರ ಮಾತು ಕೇಳಿ ಕೆಲಸ ಮಾಡುವಅವಶ್ಯಕತೆ ಇಲ್ಲ’ ಎಂದು ಟಾಂಗ್ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಂ ಜೆ. ಗೌಡ,ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT