ಹಾಸನ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ಶಿವಾಲಯಗಳಲ್ಲಿ ವಿಶೇಷ ಪೂಜೆ, ವಿವಿಧ ಅಭಿಷೇಕಗಳು ಹಾಗೂ ಧಾರ್ಮಿಕ ವಿಧಿವಿಧಾನಗಳು ಜರುಗಿದವು.

ಈ ಬಾರಿ ಶಿವರಾತ್ರಿ ಭಾನುವಾರ ಬಂದಿರುವುದರಿಂದ ಸಾವಿರಾರು ಭಕ್ತರು ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಬಂದು ಶಿವನ ದರ್ಶನ ಪಡೆದರು. ಶಿವಾಲಯಗಳ ಮೂರ್ತಿಗಳನ್ನು ಹೂವಿನ ಹಾರಗಳು, ಬಣ್ಣದ ಅಲಂಕಾರ ಮತ್ತು ವಿದ್ಯುತ್ ದೀಪಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು.

ಬೆಳಿಗ್ಗೆಯಿಂದಲೇ ಜಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಸಹಸ್ರನಾಮಾರ್ಚನೆ, ಬಿಲ್ವಪತ್ರಾರ್ಚನೆ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಬಿಲ್ವಪತ್ರೆ ಹಾಗೂ ಹಾಲು ತಂದು ದೇವರಿಗೆ ಅಭಿಷೇಕ ಸಲ್ಲಿಸಿದ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಹಲವರು ಉಪವಾಸ ವ್ರತ ಆಚರಿಸಿದರು.

ರಾತ್ರಿ ಜಾಗರಣೆ ಆರಂಭಗೊಂಡು ಭಜನೆ, ಶಿವನಾಮ ಸ್ಮರಣೆ ಹಾಗೂ ಶಿವಯೋಗ ಕಾರ್ಯಕ್ರಮ ನಡೆದವು. ಭಾನುವಾರ ಮಧ್ಯಾಹ್ನದಿಂದಲೇ ಹಲವೆಡೆ ಪ್ರಸಾದ ವಿತರಣೆಯು ನಡೆಯಿತು. ಸೋಮವಾರ ನಸುಕಿನವರೆಗೂ ಜಾಗರಣೆ ಮುಂದುವರಿಯಿತು ಎಂದು ದೇವಾಲಯ ಸಮಿತಿಗಳು ತಿಳಿಸಿವೆ.

ನಗರದ ಶಂಕರಿಪುರಂ ಬಡಾವಣೆಯ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ಜರುಗಿದವು. ಕಸ್ತೂರಿಬಾ ರಸ್ತೆ, ದೊಡ್ಡಬಸ್ತಿ ಬಳಿಯ ವಿರುಪಾಕ್ಷೇಶ್ವರ ದೇವಸ್ಥಾನದಲ್ಲೂ ಮಹಾಶಿವರಾತ್ರಿ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಿ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಧರ್ಮಸ್ಥಳ ಆಯುರ್ವೇದ ಕಾಲೇಜು ಆವರಣದ ಹಳ್ಳದ ರಾಮೇಶ್ವರ ದೇವಸ್ಥಾನ, ಬಸವೇಶ್ವರ ದೇವಾಲಯ ಸೇರಿದಂತೆ ವಿವಿಧ ಬಡಾವಣೆಗಳ ಶಿವಾಲಯಗಳಲ್ಲಿ ದಿನವಿಡೀ ಪೂಜೆ-ಅಭಿಷೇಕಗಳು ನಡೆದವು.

ನಗರದ ಮಾರುಕಟ್ಟೆಗಳಲ್ಲಿ ಬಿಲ್ವಪತ್ರೆ , ಮುತ್ತುಗದ ಹೂ ಸೇರಿದಂತೆ ಫಲ-ಪುಷ್ಪಗಳ ಮಾರಾಟ ಜೋರಾಗಿದ್ದು, ಬೆಲೆ ಏರಿಕೆಯ ನಡುವೆಯೂ ಸಾರ್ವಜನಿಕರು ಖರೀದಿಯಲ್ಲಿ ತೊಡಗಿದ್ದ ದೃಶ್ಯ ಕಂಡುಬಂತು. ದೇವಾಲಯಗಳ ಆವರಣದಲ್ಲಿ ಸಾಲುಗಟ್ಟಿ ನಿಂತ ಭಕ್ತರು ಶಿಸ್ತುಬದ್ಧವಾಗಿ ಶಿವನ ದರ್ಶನ ಪಡೆದು ಹೊರಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮಹಾಶಿವರಾತ್ರಿ ಅಂಗವಾಗಿ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಹಾಸನ ನಗರದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಶಂಕರಿಪುರಂನ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ದರ್ಶನದ ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗವೂ ನಡೆಯಿತು. ಚೋಳರ ಕಾಲದಲ್ಲಿ ನಿರ್ಮಾಣಗೊಂಡು ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯಕ್ಕೆ ಪ್ರತಿವರ್ಷ ಹಾಸನ ನಗರ ಸೇರಿದಂತೆ ಸುತ್ತಲಿನ ತಾಲ್ಲೂಕುಗಳಿಂದ 20 ಸಾವಿರಕ್ಕೂ ಅಧಿಕ ಭಕ್ತರು ಬರುತ್ತಾರೆ ಎಂದು ಹಾಸನ ನಗರಪಾಲಿಕೆ ಸದಸ್ಯ ದಯಾನಂದ ಮಾಹಿತಿ ನೀಡಿದರು.

ಹಳೇಬೀಡು ವರದಿ:

ಮಹಾ ಶಿವರಾತ್ರಿ ಪ್ರಯುಕ್ತ ಹಳೇಬೀಡಿನ ಶಿವನ ದೇವಾಲಯಗಳಲ್ಲಿ ಭಾನುವಾರ ಮುಂಜಾನೆಯಿಂದಲೇ ವಿಶೇಷ ಪೂಜೆಯೊಂದಿಗೆ ಶಿವನಾಮ ಸ್ಮರಣೆ ನಡೆಯಿತು.

ಪುಷ್ಪಗಿರಿ ಮಠದ 108 ಲಿಂಗ ಮಂದಿರದಲ್ಲಿ ಮುಂಜಾನೆಯಿಂದಲೇ ವೇದ ಮಂತ್ರ ಘೋಷ ಮೊಳಗಿತ್ತು. ಪ್ರಧಾನ ಲಿಂಗಕ್ಕೆ ಮಠದ ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಪಂಚಾಮೃತ ಅಭಿಷೇಕ ನೆರವೇರಿಸಿದರು. ಮಠದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪೂಜಾ ವಿಧಾನಗಳಿಗೆ ಸಾಥ್ ನೀಡಿದರು. ಶಿವನಿಗೆ ಇಷ್ಟವಾದ ಬಿಲ್ವಪತ್ರೆಯ ಅರ್ಚನೆ ನೆರವೇರಿಸಿದ ನಂತರ, ವಿವಿಧ ಬಗೆಯ ಹೂವುಗಳನ್ನು ಅರ್ಪಿಸಲಾಯಿತು. ನಂತರ ಲಿಂಗಗಳಿಗೆ ವಿಭೂತಿ ಲೇಪನ ಮಾಡಿ, ಪ್ರಧಾನ ಲಿಂಗಕ್ಕೆ ಅಲಂಕಾರ ಸೇವೆ ನೆರವೇರಿಸಲಾಯಿತು. ನಂತರ ಮಹಾಮಂಗಳಾರತಿ ನಡೆಯಿತು.

ಹೊಯ್ಸಳರ ಕಾಲದ ಮಲ್ಲಿಕಾರ್ಜನ ಸ್ವಾಮಿ ದೇವಾಲಯದಲ್ಲಿ ಮುಂಜಾನೆ ನಸುಕಿನಿಂದಲೆ ಶಿವಭಕ್ತರು ಜಮಾಯಿಸಿದ್ದರು. ಭಕ್ತರು ನೂಕು ನುಗ್ಗಿಲಿನಲ್ಲಿ ಪರಮೇಶ್ವರನ ದರ್ಶನ ಪಡೆದರು. ದೇವಾಲಯದ ದಾಸೋಹ ಸಮಿತಿ ಹಾಗೂ ಅರ್ಚಕ ವೃಂದದವರು ವಿಶೇಷ ಪೂಜೆ ನಡೆಸಿದರು. ವಿವಿಧ ಊರಿನಿಂದ ಆಗಮಿಸಿದ್ದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಅರಕಲಗೂಡು: ಸಂಭ್ರಮದ ಮಹಾಶಿವರಾತ್ರಿ

ಅರಕಲಗೂಡು: ಪಟ್ಟಣದಲ್ಲಿ ಭಾನುವಾರ ಮಹಾ ಶಿವರಾತ್ರಿಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕಗಳನ್ನು ನಡೆಸಲಾಯಿತು. ಕೋಟೆ ಪುರಾಣ ಪ್ರಸಿದ್ದ ಅಮೃತೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ಮಹಾನ್ಯಾಸ ಪೂರ್ವಕರುದ್ರಾಭಿಷೆಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಯಿತು. ಸಂಜೆ ಗಿರಿಜಾ ಕಲ್ಯಾಣವನ್ನು ವೈಭವದಿಂದ ನೆರವೇರಿಸಲಾಯಿತು. ರಾತ್ರಿ ಉತ್ಸವ ಹಾಗೂ ನಾಲ್ಕುಯಾಮಗಳ ಕಾಲ ರುದ್ರಾಭಿಷೇಕ ನಡೆಸಲಾಯಿತು.

ಸಮೀಪದ ಶಂಭುನಾಥ ಪುರದ ಸ್ವಯಂಭುನಾಥೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ ನಡೆಸಲಾಯಿತು. ಭಕ್ತರು ಶಿವನ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ರಾತ್ರಿ ಸಾಮೂಹಿಕ ಭಜನೆ, ಜಾಗರಣೆಗಳು ನಡೆದವು.

ಇಂದು ರಥೋತ್ಸವ: ಕೋಟೆ ಅಮೃತೇಶ್ವರ ಸ್ವಾಮಿ ಮಹಾರಥೋತ್ಸವವು ಫೆ.16 ರಂದು ಸೋಮವಾರ ನಡೆಯಲಿದೆ. ರಥೋತ್ಸವಕ್ಕಾಗಿ ರಥವನ್ನು ಸಿದ್ಧಗೊಳಿಸಲಾಗಿದೆ. ದೇವಾಲಯವನ್ನು ವಿದ್ಯುತ್ ದೀಪ, ತಳಿರು ತೋರಣಗಳಿಂದ ಅಲಂಕರಿಸಿದ್ದು ಸಂಭ್ರಮದ ವಾತಾವರಣ ಮನೆಮಾಡಿದೆ. ಬೆಳಿಗ್ಗೆ 9.30ಕ್ಕೆ ಕೃಷ್ಣಗಂಧೋತ್ಸವ ನಡೆಯಲಿದೆ. 10.30ಕ್ಕೆ ಮೇಶ ಲಗ್ನದಲ್ಲಿ ಅಮೃತೇಶ್ವರಸ್ವಾಮಿ ಮಹಾರಥೋತ್ಸವ ನೆರವೇರಲಿದೆ.

ಹಿರೀಸಾವೆ: ಶನೇಶ್ವರ ಸ್ವಾಮಿ ರಥೋತ್ಸವ

ಹಿರೀಸಾವೆ: ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ರಾಮೇಶ್ವರಸ್ವಾಮಿ, ಬ್ರಹ್ಮ ಲಿಂಗೇಶ್ವರ, ಸಿದ್ದಲಿಂಗೇಶ್ವರ, ಪಿಳ್ಳೇಶ್ವರ ಸ್ವಾಮಿ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಭಾನುವಾರ ವಿಶೇಷ ಪೂಜೆಗಳು ನಡೆದವು.

ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ ಅಭಿಷೇಕದ ನಂತರ ಸತ್ಯನಾರಯಣ ಸ್ವಾಮಿ ಪೂಜೆ ನಡೆಯಿತು. ಮಧ್ಯಾಹ್ನ 2 ಗಂಟೆಗೆ ಶನಿದೇವರ ರಥೋತ್ಸವ ಜರುಗಿತು. ಭಕ್ತರು ರಥದ ಮೇಲೆ ಕರಿ ಎಳ್ಳು ಬೀರಿದರು. ರಾಮೇಶ್ವರಸ್ವಾಮಿ ಮತ್ತು ಪಿಳ್ಳೇಶ್ವರಸ್ವಾಮಿ ದೇವಸ್ಥಾನಗಳಲ್ಲಿ ಅಭಿಷೇಕ ಸೇರಿದಂತೆ ಹಲವು ಪೂಜೆಗಳನ್ನು ಭಕ್ತರು ನಡೆಸಿದರು. ಹೋಬಳಿಯ ಬೆಳಗೀಹಳ್ಳಿ, ಕಬ್ಬಳಿ, ಮಾದಲಗೆರೆ ಸೇರಿದಂತೆ ಎಲ್ಲಾ ಗ್ರಾಮಗಳಲ್ಲಿನ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

ಹೊಳೆನರಸೀಪುರ: ಪೂಜೆ, ತೀರ್ಥ, ಪ್ರಸಾದ ವಿತರಣೆ

ಹೊಳೆನರಸೀಪುರ: ಶಿವರಾತ್ರಿ ದಿನವಾದ ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಬೆಳಗಿನಜಾವದ ವರೆಗೆ ಪಟ್ಟಣದ ವಿವಿಧ ದೇವಾಲಯಗಳಲ್ಲಿ ಅಭಿಷೇಕ, ಪೂಜೆ, ಮಹಾ ಮಂಗಳಾರತಿ ನಡೆದವು. ಭಕ್ತರು ಶ್ರದ್ಧೆಯಿಂದ ಭಾಗವಹಿಸಿ ಭಕ್ತಿ ಸಮರ್ಪಿಸಿದರು.

ಪಟ್ಟಣದ ಸೀತಾವಿಲಾಸ ರಸ್ತೆಯ ಮೈಲಾರಲಿಂಗೇಶ್ವರ, ಕೋಟೆ ರಥಬೀದಿಯಲ್ಲಿರುವ ಓಂಕಾರೇಶ್ವರ, ನೀಲಕಂಠೇಶ್ವರ, ರಿವರ್ ಬ್ಯಾಂಕ್ ರಸ್ತೆಯ ಲಕ್ಷ್ಮಣೇಶ್ವರ, ದೊಡ್ಡಮನೆ ಛತ್ರದ ಬೀದಿಯ ಏಕಾಂತ ರಾಮೇಶ್ವರ, ಕುಂಬಾರ ಬೀದಿಯ ಕುಂಭಳೇಶ್ವರ, ತಾಲ್ಲೂಕಿನ ಗುಂಜೇವು ಗ್ರಾಮದ ಮೈಲಾರಲಿಂಗೇಶ್ವರ, ಎಳ್ಳೇಶಪುರದ ಎಳ್ಳುಲಿಂಗೇಶ್ವರ, ಬಾಗಿವಾಳಿನ ವೀರಭದ್ರೇಶ್ವರ ಮತ್ತು ರಾಮೇಶ್ವರ, ಹರದನಹಳ್ಳಿಯ ದೇವೇಶ್ವರ, ಉಣ್ಣೇನಹಳ್ಳಿ ಕೊಪ್ಪಲಿನ ಪ್ರಸನ್ನೇಶ್ವರ, ಬಿಚೇನಹಳ್ಳಿಯ ಚಂದ್ರಮೌಳೇಶ್ವರ, ಬೈರವೇಶ್ವರ, ಬಸವೇಶ್ವರ, ಹಳ್ಳಿಮೈಸೂರಿನ ಬಸವೇಶ್ವರ, ನಾಗಲಾಪುರದ ಅಂಕನಾಥೇಶ್ವರ, ಪಂಚಲಿಂಗೇಶ್ವರ, ಐಚನಹಳ್ಳಿಯ ಬಸವೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಎಯಿತು.

ಹಿರೆಬೆಳಗುಲಿಯ ಬಸವೇಶ್ವರ, ಮಲ್ಲೇಶ್ವರ ದೇವಾಲಯ, ಎಸ್.ಅಂಕನಹಳ್ಳಿ, ಮಲ್ಲಪ್ಪನಹಳ್ಳಿ, ಹಾವಿನಮಾರನಹಳ್ಳಿ ಹಾಗೂ ಜವರೀಕೊಪ್ಪಲಿನ ಬೀರಲಿಂಗೇಶ್ವರ, ಬಂಡಿಶೆಟ್ಟಿಹಳ್ಳಿಯ ಶಿವಶರಣ ಹರಳಯ್ಯನವರ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ಪೂಜಾವಿಧಿ ವಿಧಾನಗಳು ನಡೆದವು.

ಈ ದೇವಾಲಯಗಳಲ್ಲಿ ಬೆಳಿಗ್ಗೆ ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಸಹಸ್ರ ಭಿಲ್ವಾರ್ಚನೆ, ಮಹಾಮಂಗಳಾರತಿ ನಂತರ ಭಕ್ತರಿಗೆ ತೀರ್ಥ ಪ್ರಸಾದ ನೀಡಲಾಗುವುದು ಎಂದು ಸೀತಾವಿಲಾಸ ರಸ್ತೆಯ ಮೈಲಾರಲಿಂಗೇಶ್ವರ ದೇವಾಲಯದ ಅರ್ಚಕರಾದ ಸುಕುಮಾರ್ ವಿವರಿಸಿದರು.

ದೇವಾಲಯಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಹಲವುಬಗೆಯ ಹೂವುಗಳಿಂದ ಅಲಂಕರಿಸಿ ಪೂಜಾವಿಧಿವಿಧಾನ ನೆರವೇರಿಸಿದರು. ಶಿವರಾತ್ರಿಗೆ ಹೂವು, ಹಣ್ಣು, ವಸ್ತ್ರದ ಜೊತೆಗೆ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಹೆಚ್ಚು ಜನರು ಆಗಮಿಸಿದ್ದರಿಂದ ಮಾರುಕಟ್ಟೆ, ಪೇಟೆ, ಕೋಟೆ ಮುಖ್ಯರಸ್ತೆಗಳು ಜನಜಂಗುಳಿಯಿಂದ ತುಂಬಿಹೋಗಿತ್ತು. ತಳ್ಳುಗಾಡಿಯವರು ರಸ್ತೆಗಳಲ್ಲೇ ನಿಂತು ವ್ಯಾಪಾರ ಮಾಡುತ್ತಿದ್ದರಿಂದ ಸಾರ್ವಜನಿಕರ ಹಾಗೂ ವಾಹನಗಳ ಓಡಾಟಕ್ಕೆ ತೀವ್ರತೊಂದರೆ ಆಗಿತ್ತು. ಪೊಲೀಸರು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತಿದ್ದರು, ಇದು ಸಾರ್ವಜನಿಕರ, ವಾಹನ ಸವಾರರ ಅಸಮಾಧಾನಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.