ಹಾಸನ: ಇಲ್ಲಿನ ಹಾಸನ ಉಪ ವಿಭಾಗದ ಡಿವೈಎಸ್ಪಿ ಪಿ.ಕೆ. ಮುರಳೀಧರ್ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ಕಳ್ಳರು, ಒಟ್ಟು ₹15.98 ಲಕ್ಷ ವರ್ಗಾವಣೆ ಮಾಡಿಕೊಂಡಿದ್ದಾರೆ.

ಅಧಿಕಾರಿಯು ಕೆನರಾ ಬ್ಯಾಂಕ್ ಮಡಿಕೇರಿ ಮುಖ್ಯಶಾಖೆ ಹಾಗೂ ಭಾಗಮಂಡಲ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. ಮೇ 20 ರಂದು ಮಧ್ಯಾಹ್ನ 1.30 ರ ಸುಮಾರಿಗೆ ಅವರ ಮೊಬೈಲ್ಫೋನ್ಗೆ ಮೆಸೇಜ್ಗಳು ಬಂದಾಗ ಹಣ ವರ್ಗಾವಣೆಯಾಗಿದ್ದು ಗೊತ್ತಾಯಿತು.

ಮಡಿಕೇರಿ ಮುಖ್ಯಶಾಖೆ ಖಾತೆಯಿಂದ ಒಟ್ಟು 25 ವರ್ಗಾವಣೆಗಳ ಮೂಲಕ ₹12,10,711 ಹಾಗೂ ಭಾಗಮಂಡಲ ಶಾಖೆ ಖಾತೆಯಿಂದ 10 ವರ್ಗಾವಣೆಗಳ ಮೂಲಕ ಒಟ್ಟು ₹ 3,88,050 ಸೇರಿದಂತೆ ಒಟ್ಟು ₹ 15,98,761 ಅನ್ನು ಅಪರಿಚಿತ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ.

ಹಣ ವರ್ಗಾವಣೆಗೊಂಡಿರುವ ಬ್ಯಾಂಕ್ ಖಾತೆಗಳನ್ನು ಹಾಗೂ ಖಾತೆದಾರರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಸೆನ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.