ಮಂಗಳವಾರ, ಸೆಪ್ಟೆಂಬರ್ 21, 2021
21 °C

ವಿದ್ಯುತ್ ಸ್ಪರ್ಶ: ಮರದ ಮೇಲೆ ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಣನೂರು: ಆಡು, ಕುರಿಗೆ ಸೊಪ್ಪು ಕಡಿಯಲು ಮರ ಏರಿದ್ದಾಗ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರು ಮರದ ಮೇಲೆ ಮೃತಪಟ್ಟಿದ್ದಾರೆ.

ರಾಮನಾಥಪುರ ಹೋಬಳಿಯ ರಾಗಿಮರೂರು ಗ್ರಾಮದ ಧರ್ಮ (38) ಮೃತವ್ಯಕ್ತಿ.

ಭಾನುವಾರ ಮಧ್ಯಾಹ್ನ ಮರ ಏರಿದ ಅವರು, ಅದೇ ಮರದ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿಯನ್ನು ಗಮನಿಸಲಿಲ್ಲ. ಸೊಪ್ಪು ಕಡಿಯುವಾಗ ಮರಕ್ಕೆ ವಿದ್ಯುತ್‌ ತಂತಿ ಸ್ಪರ್ಶಿಸಿದೆ.

ಧರ್ಮ ಅವರು ಚಾಲಕರಾಗಿದ್ದು, ಭಾನುವಾರ ಕುರಿ ಮೇಯಿಸಲು ಹೋಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.