ಸೋಮವಾರ, ಜನವರಿ 25, 2021
19 °C

ಆನೆಗುಂಡಿ ಪ್ರದೇಶದಲ್ಲಿ ಹೆಣ್ಣಾನೆ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆತ್ತೂರು: ಹೋಬಳಿಯ ಅರಣಿ ಗ್ರಾಮ ಸಮೀಪದ ಆನೆಗುಂಡಿ ಪ್ರದೇಶದಲ್ಲಿ ಶನಿವಾರ 24 ವರ್ಷದ ಹೆಣ್ಣಾನೆ ಶವ ಪತ್ತೆಯಾಗಿದೆ.

ಕಾಲಿಗೆ ಆಗಿದ್ದ ಗಾಯದಿಂದ ಯಸಳೂರು ವಲಯದ ಹೊಂಡದಲ್ಲಿ ಎರಡು ದಿನಗಳಿಂದ ಬಿದ್ದು ನರಳುತ್ತಿತ್ತು. ಅತಿಯಾದ ನೋವಿನಿಂದ ಮೃತಪಟ್ಟಿರಬಹುದು ಎನ್ನಲಾಗಿದೆ. ಸ್ಥಳೀಯರು ಶವ ನೋಡಿ ಮಾಹಿತಿ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ವಲಯ ಅರಣ್ಯಾಧಿಕಾರಿ ಮೋಹನ್ ಭೇಟಿ ನೀಡಿ ಪರಿಶೀಲಿಸಿದರು.

ವೈದ್ಯ ಮುರಳಿಧರ್ ಅವರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಸಂಸ್ಕಾರ ಮಾಡಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು