ಸಕಲೇಶಪುರ: ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಬಾಂಗ್ಲಾ ದೇಶದ ಮುಸ್ಲಿಮರಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಟ್ಟಿರುವ ಅನುಶ್ರೀ ಮೇಲೆ ದೇಶದ್ರೋಹದ ಮೊಕದ್ದಮೆ ದಾಖಲಿಸಬೇಕು ಎಂದು ವಿಶ್ವಹಿಂದೂ ಪರಿಷತ್ ರಾಜ್ಯ ಕಾರ್ಯಕಾರಿಣಿ ಸದಸ್ಯ ರಘು ಸಕಲೇಶಪುರ ಆಗ್ರಹಿಸಿದ್ದಾರೆ.
‘ನಕಲಿ ಜನನ ಪ್ರಮಾಣ ಪತ್ರ ತಯಾರಿಸಿ, ನಕಲಿ ಆಧಾರ್‌ಕಾರ್ಡ್ ಮಾಡುವ ಮೂಲಕ ದೇಶದ್ರೋಹದ ಕೆಲಸ ಮಾಡಿದ್ದಾರೆ. ಇವರ ಪರವಾಗಿ ವಕೀಲರು ವಕಾಲತ್ತು ವಹಿಸಬಾರದು ಎಂದು ಭಾನುವಾರ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಅನುಶ್ರೀ ವಿರುದ್ಧ ಎನ್‌ಐಎ ತನಿಖೆ ನಡೆಸಬೇಕು. ಅನುಶ್ರೀ ಒಬ್ಬರಿಂದ ಇಂತಹ ಕೃತ್ಯ ನಡೆದಿಲ್ಲ. ಇದರ ಹಿಂದೆ ಜಿಲ್ಲಾಧಿಕಾರಿ ಕಚೇರಿಯ ಒಳಗೆ ಹಾಗೂ ಹೊರಗೆ ಯಾರ ಯಾರ ಕೈವಾಡ ಇದೆ ಎಂಬ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.