ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಹಸಿರು ವನದಲ್ಲಿ ಪ್ರಾಣಿ–ಪಕ್ಷಿಗಳ ವಿಹಾರ: ಯುವ ರೈತರಿಗೆ ಮಾದರಿಯಾದ ರಾಘವೇಂದ್ರ

ಬಿ.ಪಿ. ಜಯಕುಮಾರ್‌
Published : 9 ಜೂನ್ 2025, 7:29 IST
Last Updated : 9 ಜೂನ್ 2025, 7:29 IST
ಫಾಲೋ ಮಾಡಿ
Comments
ಹಸಿರುವನದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ನವಿಲುಗಳು
ಹಸಿರುವನದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ನವಿಲುಗಳು
ಹಸಿರುವನದಲ್ಲಿ ಬಿ.ರಾಘವೇಂದ್ರ
ಹಸಿರುವನದಲ್ಲಿ ಬಿ.ರಾಘವೇಂದ್ರ
ಅರಣ್ಯ ಬೆಳೆಸದೇ ಇದ್ದರೆ ಮುಂದೊಂದು ದಿನ ಮನುಷ್ಯ ಕುಡಿಯುವ ನೀರಿಗೂ ಅಲೆಮಾರಿಗಳಂತೆ ಅಲೆಯಬೇಕಾಗುತ್ತದೆ
ಬಿ.ರಾಘವೇಂದ್ರ ಸಾಕಮ್ಮ ಬಸವೇಗೌಡ ಸೇವಾ ಸಂಜೀವಿನಿ ಟ್ರಸ್ಟ್ ಅಧ್ಯಕ್ಷ
ನಿಸರ್ಗದ ರಕ್ಷಣೆಯಿಂದ ಮಾತ್ರ ಆರೋಗ್ಯವಂತ ಜೀವನ ನಡೆಸಬಹುದಾಗಿದ್ದು ರಾಘವೇಂದ್ರ ಅವರು ಸಸ್ಯ ಸಂಪತ್ತನ್ನು ಬೆಳೆಸಿ ಪಕ್ಷಿ ಸಂಕುಲಕ್ಕೆ ಆಶ್ರಯ ನೀಡಿದ್ದಾರೆ. ಇದನ್ನು ವ್ಯಾಪಕವಾಗಿ ಪರಿಚಯಿಸುವ ಕಾರ್ಯವಾಗಬೇಕು
ಸಿ.ಎನ್. ಬಾಲಕೃಷ್ಣ ಶಾಸಕ
ಜೀವ ವೈವಿಧ್ಯ ಉಳಿಯಬೇಕಾದರೆ ಸಾವಯವ ಕೃಷಿ ಹಾಗೂ ನೈಸರ್ಗಿಕ ಕೃಷಿಯಿಂದ ಮಾತ್ರ ಸಾಧ್ಯ. ಸಾವಯವ ಕೃಷಿಕ ಬಿ. ರಾಘವೇಂದ್ರ ಅವರ ಪರಿಸರದ ಕಾಳಜಿಯೇ ನಮ್ಮೂರಿಗೆ ಹೆಮ್ಮೆ
ಬಿ.ಎನ್.ಕೇಶವಮೂರ್ತಿ ಬೆಕ್ಕ ಗ್ರಾಮ ಪಂಚಾಯಿತಿ ಸದಸ್ಯ
ತೀರ್ಥಂಕರರ ಚೈತ್ಯ ವೃಕ್ಷ
ಜೈನ ಧರ್ಮದ 24 ತೀರ್ಥಂಕರರಿಗೂ ಒಂದೊಂದು ಚೈತ್ಯ ವೃಕ್ಷಗಳಿದ್ದು ವೃಷಭನಾಥ ತೀರ್ಥಂಕರರಿಂದ ಹಿಡಿದು ಮಹಾವೀರ ತೀರ್ಥಂಕರರವರೆಗೆ ಚೈತ್ಯ ವೃಕ್ಷಗಳನ್ನು ಬೆಳೆಸಿದ್ದಾರೆ. ಎಲ್ಲೂ ಇರದ ಅಪರೂಪದ ತೀರ್ಥಂಕರ ವನ ಇದಾಗಿದೆ. ತೀರ್ಥಂಕರ ವನದಂತೆ ನಕ್ಷತ್ರ ವನ ರಾಶಿ ವನ ಮೊದಲಾದ 250 ಪ್ರಭೇದದ ಸಸ್ಯಗಳನ್ನು ಇವರು ಉತ್ತರ ಭಾರತದಲ್ಲಿ ಸಂಗ್ರಹಿಸಿ ಇಲ್ಲಿ ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಿದ್ದಾರೆ. ಸಾವಯವ ಕೃಷಿ ಮತ್ತು ಪರಿಸರದ ಕಾಳಜಿಯನ್ನು ಕಂಡು ಅನೇಕ ಶಾಲಾ ವಿದ್ಯಾರ್ಥಿಗಳು ಕೃಷಿ ಪದವೀದರರು ಕೃಷಿ ತೋಟಗಾರಿಕಾ ತಜ್ಞರು ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಪಕ್ಷಿಗಳ ಆವಾಸ ಸ್ಥಾನ
ನವಿಲುಗಳು ನಿರ್ಭೀತಿಯಿಂದ ಆಹಾರ ತಿನ್ನುತ್ತಾ ಪ್ರಕೃತಿಯ ಮಧ್ಯೆ ಗರಿ ಬಿಚ್ಚಿ ನೃತ್ಯ ಮಾಡುವ ದೃಶ್ಯ ನಯನ ಮನೋಹರ. ಆದಾಯದ ಸ್ವಲ್ಪ ಭಾಗವನ್ನು ರಾಘವೇಂದ್ರ ಅವರು ಪಕ್ಷಿಗಳ ಆಹಾರಕ್ಕೆ ಮತ್ತು ಔಷಧಿ ಸಸ್ಯಗಳ ಬೆಳವಣಿಗೆಗೆ ಮೀಸಲಿರಿಸಿದ್ದಾರೆ. ‘ಕೃಷಿಗೆ ಪೂರಕವಾದ ಮರಗಿಡಗಳನ್ನು ಪ್ರತಿಯೊಬ್ಬರೂ ನೆಡಬೇಕು. ಪಕ್ಷಿಗಳಿಲ್ಲದೇ ಮರಗಳಿಗೆ ಕೀಟಗಳ ಬಾಧೆ ಹೆಚ್ಚಾಗಿದೆ. ಇದನ್ನು ನಿವಾರಿಸುವುದು ಪರಿಸರ ಕೃಷಿಯಿಂದ ಮಾತ್ರ ಸಾಧ್ಯ’ ಎಂದು ರಾಘವೇಂದ್ರ ಹೇಳುತ್ತಾರೆ. ಇವರ ತೋಟಗಳಲ್ಲಿ ನವಿಲು ಗೂಬೆ ಕೆಂಬೂತ ಮರಕುಟಿಗ ಗುಬ್ಬಚ್ಚಿ ಮತ್ತಿತರ ಪಕ್ಷಿಗಳು ಸದಾ ಬರುತ್ತವೆ. ಅವುಗಳಿಗೂ ಸ್ವಚ್ಛಂದವಾಗಿ ವಿಹರಿಸಲು ಅವಕಾಶವಿದ್ದು ಆಹಾರವನ್ನು ಒದಗಿಸುವ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಪಕ್ಷಿಗಳು ಮರಗಿಡಗಳ ಮೇಲಿರುವ ಕ್ರಿಮಿಕೀಟಗಳನ್ನು ತಿನ್ನುವುದರಿಂದ ತೆಂಗಿನ ಮರ ಔಷಧಿ ಸಸ್ಯ ಹಾಗೂ ಇನ್ನಿತರೆ ಬೆಳೆಗಳಿಗೆ ಕೀಟ ಬಾಧೆ ಆಗುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT