ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏ. 21ಕ್ಕೆ ಬೆಂಗಳೂರಿನಲ್ಲಿ ರೈತ ಸಮಾವೇಶ: ಕೋಡಿಹಳ್ಳಿ ಚಂದ್ರಶೇಖರ್

ಉತ್ತಮ ಆಡಳಿತ ನೀಡಲು ರಾಜಕೀಯ ಪ್ರವೇಶಕ್ಕೆ ಚಿಂತನೆ
Last Updated 30 ಮಾರ್ಚ್ 2022, 16:32 IST
ಅಕ್ಷರ ಗಾತ್ರ

ಹಾಸನ: ಮೂರು ಪಕ್ಷಗಳು ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿರುವಹಿನ್ನೆಲೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಏ. 21ರಂದು ಬೆಂಗಳೂರಿನಬಸವನಗುಡಿ ಕಾಲೇಜು ಮೈದಾನದಲ್ಲಿ ರೈತರ ಬೃಹತ್‌ ಸಮಾವೇಶಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ನಗರದ ಬಿ.ಎಂ. ರಸ್ತೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬುಧವಾರ ಹಮ್ಮಿಕೊಂಡಿದ್ದಮೂರು ಕೃಷಿ ಕಾಯಿದೆಗಳ ಹಿಂಪಡೆಯಲು ಮುಂದಿನ ಕಾರ್ಯಕ್ರಮಗಳರೂಪರೇಷೆಗಳ ಬಗ್ಗೆ ನಿರ್ಣಯ ಕೈಗೊಳ್ಳುವಸಭೆ ಅಧ್ಯಕ್ಷತೆ ವಹಿಸಿಮಾತನಾಡಿದರು.

1956ರ ಕೃಷಿ ಮಾರುಕಟ್ಟೆ ಕಾಯಿದೆಗೆ ತಿದ್ದುಪಡಿ ಮಾಡಿದ ಕಾರಣ ಈಗ ಭೂಮಿಖರೀದಿ ಎರಡರಷ್ಟು ಹೆಚ್ಚಾಗಿದೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ರಾತ್ರಿ7 ರ ವರೆಗೂ ಕೆಲಸ ಮಾಡಲು ಕಂದಾಯ ಸಚಿವ ಆರ್.ಅಶೋಕ್ಸೂಚಿಸಿದ್ದಾರೆ ಎಂದರೇ ರೈತರ ಕೈತಪ್ಪಿ ಭೂಮಿಯು ದೊಡ್ಡ ಪ್ರಮಾಣದಲ್ಲಿಹಸ್ತಾಂತರ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ರಾಜಕೀಯಕ್ಕೆ ಯುವಕರು, ಹೊಸ ತಲೆಮಾರುಗಳ ಪ್ರವೇಶ ಅವಶ್ಯಕತೆ ಇದೆ.ದೆಹಲಿ ಮತ್ತು ಪಂಜಾಬ್‌ನಲ್ಲಿ ಈಗಾಗಲೇ ಬದಲಾವಣೆಯ ಗಾಳಿ ಬೀಸಿದ್ದು,ಅದರಂತೆ ಕರ್ನಾಟಕದಲ್ಲಿಯೂ ಅದಕ್ಕಿಂತ ಉತ್ತಮ ಆಡಳಿತ
ಕೊಡುವುದಾದರೇ ನಾವೇಕೆ ರಾಜಕೀಯ ಪ್ರವೇಶ ಮಾಡಬಾರದು? ಮೊಬೈಲ್ಮಾರುವ ಹುಡುಗ ಮುಖ್ಯಮಂತ್ರಿ ವಿರುದ್ಧ ಗೆಲುವು ಸಾಧಿಸಿರುವುದೇಉದಾಹರಣೆ ಎಂದರು.

ಅರಸೀಕೆರೆ ರೈತ ಸಂಘದ ಅಧ್ಯಕ್ಷ ಕೆ.ಪಿ. ಮೂರ್ತಿ, ಶಾಂತಿಗ್ರಾಮ ಹೋಬಳಿಅಧ್ಯಕ್ಷ ಬೋರಣ್ಣ ಹಾಗೂ ಸಾಲಗಾಮೆ ಹೋಬಳಿ ಅಧ್ಯಕ್ಷ ಪುಟ್ಟರಾಜು ಅವರಿಗೆಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ರಾಜ್ಯಉಪಾಧ್ಯಕ್ಷ ಆನೆಕೆರೆ ರವಿ, ಶ್ರೀಧರ್ ಶೆಟ್ಟಿ, ಜಿಲ್ಲಾಧ್ಯಕ್ಷ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT