ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನರಾಯಪಟ್ಟಣ | ಶ್ರಾವಣ: ಸಂಭ್ರಮದ ಶನಿದೇವರ ಉತ್ಸವ

Published : 31 ಆಗಸ್ಟ್ 2024, 13:32 IST
Last Updated : 31 ಆಗಸ್ಟ್ 2024, 13:32 IST
ಫಾಲೋ ಮಾಡಿ
Comments

ಚನ್ನರಾಯಪಟ್ಟಣ: ಶ್ರಾವಣ ಮಾಸದ ಕಡೇ ಶನಿವಾರದ ಅಂಗವಾಗಿ ಪಟ್ಟಣದಲ್ಲಿ ಶನಿದೇವರ ವೈಭವದ ಉತ್ಸವ ಜರುಗಿತು.

ಶನಿದೇವರ ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ಸಮಿತಿಯಿಂದ ಉತ್ಸವ ಆಯೋಜಿಸಲಾಗಿತ್ತು.

ಬೆಳಿಗ್ಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬೆಳ್ಳಿ ರಥದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಮೆರವಣಿಗೆಗೆ ಚಾಲನೆ ನಿಡಲಾಯಿತು. ಬಾಗೂರು ರಸ್ತೆಯಿಂದ ಪ್ರಾರಂಭವಾದ ಮೆರವಣಿಗೆ ಗಣಪತಿ ಸಮುದಾಯ ಭವನ, ಕೋಟೆ ಪ್ರದೇಶ, ನವೋದಯ ವೃತ್ತ, ಕೆ.ಆರ್. ವೃತ್ತ, ಹಳೇ ಬಸ್‍ನಿಲ್ದಾಣ ಮತ್ತು ಆಂಜನೇಯ ಸ್ವಾಮಿ ದೇಗುಲದ ಮೂಲಕ ಸ್ವಸ್ಥಾನ ತಲುಪಿತು.

ಚಂಡೆವಾದ್ಯ, ವೀರಗಾಸೆ ಸೇರಿ ವಿವಿಧ ಜಾನಪದ ಕಲಾತಂಡದೊಂದಿಗೆ ಮೆರವಣಿಗೆ ಸಾಗಿತು. ದೇವರನ್ನು ಪ್ರತಿಷ್ಠಾಪಿಸಿದ್ದ ವಾಹನದ ಮುಂದೆ ಮಂಗಳ ವಾದ್ಯದ ನಾದ ಮೊಳಗಿತು. ಮೆರವಣಿಗೆ ತೆರಳುವ ದಾರಿಯಲ್ಲಿ ಭಕ್ತಾದಿಗಳು ದೇವರಿಗೆ ಹಣ್ಣು, ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು.

ಮುಖಂಡರಾದ ರಾಜಣ್ಣ, ಸ್ವಾಮಿ, ಗಿರೀಶ್, ರಾಜಣ್ಣ, ಶಾಂತರಾಜು, ಮೋಹನ್ ಇತರರು ಭಾಗವಹಿಸಿದ್ದರು.

ಭಾನುವಾರ ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ ಏರ್ಪಡಿಸಲಾಗಿದ್ದು, ನಂತರ ಸಾವಿರಾರು ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT