ಬುಧವಾರ, ನವೆಂಬರ್ 30, 2022
16 °C
ಹಾಸನ ಹಾಲು ಒಕ್ಕೂಟದ ಸಾಮಾನ್ಯ ಸಭೆ

ಹಾಲು ಉತ್ಪಾದಕರಿಗೆ ಗಣೇಶ ಹಬ್ಬದ ಉಡುಗೊರೆ; ಪ್ರತಿ ಲೀಟರ್‌ಗೆ ₹ 30: ರೇವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ₹ 30 ದರ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ, ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.

ನಗರದಲ್ಲಿ ಗುರುವಾರ ನಡೆದ ಹಾಸನ ಹಾಲು ಒಕ್ಕೂಟದ ವಾರ್ಷಿಕ‌ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಾಲು ಉತ್ಪಾದಕರಿಗೆ ಇದು ಗಣೇಶ ಹಬ್ಬದ ಉಡುಗೊರೆಯಾಗಿದ್ದು, ಇಡೀ ರಾಜ್ಯದಲ್ಲಿ ಅತೀ ಹೆಚ್ಚು ದರ ನೀಡಿದ ಹಿರಿಮೆ ಹಾಸನ ಒಕ್ಕೂಟದ್ದಾಗಿದೆ. ಇದು ಸೆ.1 ರಿಂದ ಜಾರಿಗೆ ಬರಲಿದೆ ಎಂದರು.

ಹಸು ಖರೀದಿಗೆ ₹ 100 ಕೋಟಿ ಸಾಲ ನೀಡುವ ಯೋಜನೆಗೆ ಒಪ್ಪಿಗೆ ನೀಡಿದ್ದು, ಅರ್ಹ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಣೆ ಮಾಡಲಾಗಿದೆ. ಇದು ಸಾಲ ಮನ್ನಾ ಅಲ್ಲ, ಸಾಲ ಮರುಪಾವತಿ ಮಾಡಬೇಕು ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ, ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

ಕಳೆದ‌ ಆರ್ಥಿಕ ವರ್ಷದಲ್ಲಿ‌ ಒಕ್ಕೂಟವು ₹ 1,700 ಕೋಟಿ ವಹಿವಾಟು ನಡೆಸಲಾಗಿದ್ದು, ₹ 22.50 ಕೋಟಿ ನಿವ್ವಳ ಲಾಭ ಗಳಿಸಿದೆ. ₹ 3.6 ಕೋಟಿಯನ್ನು ಹಾಲು ಉತ್ಪಾದಕ ಸಂಘಗಳಿಗೆ ಬೋನಸ್ ನೀಡಲಾಗುವುದು ಎಂದರು.

ಈ ವರ್ಷ ₹ 2 ಸಾವಿರ ಕೋಟಿ ವಹಿವಾಟು ನಡೆಸುವ ಗುರಿ‌ ಇದ್ದು, ಈಗಾಗಲೇ ಒಕ್ಕೂಟ ₹ 20 ಕೋಟಿ ಲಾಭ ಗಳಿಸಿದೆ ಎಂದರು. ₹ 560 ಕೋಟಿ ವೆಚ್ಚದಲ್ಲಿ‌ ಮೆಗಾ ಡೈರಿಯ ಕಾಮಗಾರಿ ಆರಂಭಿಸಿದ್ದು, ಮೆಗಾ ಡೈರಿ‌ 2023 ರ ಡಿಸೆಂಬರ್‌ಗೆ ಪೂರ್ಣವಾಗಲಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು