ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಶಂಕಿತ ಡೆಂಗಿ ಜ್ವರಕ್ಕೆ ಬಾಲಕಿ ಸಾವು

Published 21 ಮಾರ್ಚ್ 2024, 12:54 IST
Last Updated 21 ಮಾರ್ಚ್ 2024, 12:54 IST
ಅಕ್ಷರ ಗಾತ್ರ

ಹಾಸನ: ಶಂಕಿತ ಡೆಂಗಿ ಜ್ವರದಿಂದ ಬಳಲುತ್ತಿದ್ದ, ನಗರದ ಬೆಥನಿ ಸೆಂಟ್ರಲ್ ಸ್ಕೂಲ್ ಶಾಲೆಯ ಎರಡನೇ ತರಗತಿಯ ಸಾತ್ವಿಕಾ (7) ಗುರುವಾರ ಮೃತಪಟ್ಟಳು.

ಬಂಡಿಹಳ್ಳಿಯ ಉಪನ್ಯಾಸಕ ಗಂಗಾಧರ ಅವರ ಪುತ್ರಿ, 3–4 ದಿನಗಳಿಂದ ಜ್ವರದಿಂದ ಬಳಲುತ್ತಿದ್ದಳು. ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಸರ್ಕಾರಿ ಹಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಾಲೆಯಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ಸಂತಾಪಸೂಚಕವಾಗಿ ರದ್ದುಗೊಳಿಸಿ ಶಾಲಾ ಆಡಳಿತ ಮಂಡಳಿ ರಜೆ ಘೋಷಿಸಿತ್ತು.

ವರದಿ ಬಳಿಕ ದೃಢ: ‘ಡೆಂಗಿ ಜ್ವರ ಲಕ್ಷಣದಿಂದ ಸಾವು ಸಂಭವಿಸಿದ್ದು, ಆ್ಯಂಟಿ ಬಾಡಿ ಟೆಸ್ಟ್ ಮೂಲಕ ಅಧಿಕೃತ ವರದಿ ಬಂದ ಬಳಿಕ ದೃಢವಾಗಲಿದೆ’ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನಾಗಪ್ಪ ತಿಳಿಸಿದರು.

‘ಬಾಲಕಿಯ ರಕ್ತ ಮತ್ತು ಇತರೆ ಮಾದರಿ ಪರೀಕ್ಷೆ ಮಾಡಲಾಗುವುದು. ಜಿಲ್ಲಾ ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕರು, ಔಷಧ ವಿಭಾಗದ ಮುಖ್ಯಸ್ಥರನ್ನು ಒಳಗೊಂಡ ಜಿಲ್ಲಾ ಸಮಿತಿ ವರದಿಯನ್ನು ರಾಜ್ಯ ಸಮಿತಿಗೆ ಕಳಿಸಲಾಗುವುದು. ಸಮಗ್ರ ಪರೀಕ್ಷೆ ಬಳಿಕ ಅಧಿಕೃತ ವರದಿ ಬರಲಿದ್ದು, ನಂತರವಷ್ಟೇ ಸಾವಿಗೆ ನಿಖರ ಕಾರಣ ಸ್ಪಷ್ಟವಾಗಲಿದೆ. ವರದಿ ಬರಲು ಒಂದು ವಾರ ಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT