ಭಾನುವಾರ, ಜನವರಿ 26, 2020
31 °C

ಪ್ರೇಯಸಿಯ ಅಶ್ಲೀಲ ಚಿತ್ರ ಹರಿಬಿಡುವ ಬೆದರಿಕೆ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಮಾಜಿ ಪ್ರೇಯಸಿಯ ನಗ್ನಚಿತ್ರಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡುವುದಾಗಿ ಬೆದರಿಸಿ ಆಕೆಯ ಪತಿಯಿಂದ ₹1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅರಸೀಕೆರೆ ತಾಲ್ಲೂಕಿನ ಅಗ್ಗುಂದ ಗ್ರಾಮದ ಎ.ಎಸ್.ವಿನಯ್ (35) ಬಂಧಿತ ಆರೋಪಿ.

ಹಾಸನದ ಯೂನಿಬಿಕ್ ಬಿಸ್ಕೆಟ್ ಕಂಪನಿಯಲ್ಲಿ ಫೀಲ್ಡ್ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿರುವ ವಿನಯ್, ಏಳು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ಇಬ್ಬರ ವಿವಾಹಕ್ಕೆ ಆತನ ತಂದೆ ಒಪ್ಪದ ಕಾರಣ ಬೇರೆ ಯುವತಿಯೊಂದಿಗೆ ವಿವಾಹವಾಗಿದ್ದ. ಪ್ರೇಯಸಿಗೂ ಎಂಟು ತಿಂಗಳ ಹಿಂದಷ್ಟೇ ಬೆಂಗಳೂರಿನ ಯುವಕನೊಂದಿಗೆ ವಿವಾಹವಾಗಿದೆ. ಮದುವೆ ನಂತರವೂ ಇಬ್ಬರು ದೂರವಾಣಿ ಮೂಲಕ ಸಂಪರ್ಕದಲ್ಲಿದ್ದರು.

ಸರ್ಕಾರಿ ಉದ್ಯೋಗದಲ್ಲಿರುವ ಯುವತಿಯ ಅಶ್ಲೀಲ ಫೋಟೊ ಹಾಗೂ ವಿಡಿಯೊಗಳನ್ನು ಸಂಪಾದಿಸಿದ ವಿನಯ್, ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡುವುದಾಗಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಯುವತಿಯ ಪತಿ ಪೊಲೀಸರಿಗೆ ದೂರು ನೀಡಿದ್ದ.

ಶನಿವಾರ ಬೆಳಿಗ್ಗೆ ವಿದ್ಯಾನಗರದ ಕೆನರಾ ಬ್ಯಾಂಕ್ ಬಳಿ ವಿನಯ್‌ನನ್ನು ಪೊಲೀಸರು ವಶಕ್ಕೆ ಪಡೆದರು. ಕಾರ್ಯಾಚರಣೆಯಲ್ಲಿ ಸಿಇಎನ್ ಠಾಣೆ ಎಸ್‌ಐ ಎಸ್.ಎಂ.ದೇವೇಂದ್ರ, ಹೆಡ್‌ ಕಾನ್‌ಸ್ಟೆಬಲ್‌ ಗಳಾದ ಭಾನು ಪ್ರಕಾಶ್, ರೂಪೇಶ್, ಶೇಖರ್ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು