ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆನರಸೀಪುರ: ಮನೆಯ ಬೀಗ ತೆಗೆದು ₹6 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Published 8 ಮೇ 2024, 14:29 IST
Last Updated 8 ಮೇ 2024, 14:29 IST
ಅಕ್ಷರ ಗಾತ್ರ

ಹಾಸನ: ಹೊಳೆನರಸೀಪುರ ತಾಲ್ಲೂಕಿನ ಸಂಕನಹಳ್ಳಿ ಗ್ರಾಮದ ಮನೆಯ ಬೀಗವನ್ನು ತೆರೆದು ₹6 ಲಕ್ಷ ಮೌಲ್ಯದ 131 ಗ್ರಾಂ ಚಿನ್ನಾಭರಣ ಹಾಗೂ 40 ಗ್ರಾಮದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿದೆ.

ಗ್ರಾಮದ ಮಧುರ ಎಂಬುವವರು ತಮ್ಮ ಪತಿ ಯೊಗೇಶ್‌ ಅವರ ಸಂಬಂಧಿಕರ ಮದುವೆಗಾಗಿ ಹೊಳೆನರಸೀಪುರದ ವೀರಭದ್ರೇಶ್ವರ ಕಲ್ಯಾಣ ಮಂಟಪಕ್ಕೆ ತೆರಳಿದ್ದರು. ಮನೆಯವರೆಲ್ಲರೂ ಬೆಳಿಗ್ಗೆ ಮನೆಗೆ ಬೀಗ ಹಾಕಿ, ಕೀ ಯನ್ನು ಪಕ್ಕದಲ್ಲಿದ್ದ ಕಿಟಕಿಯ ಮೇಲಿಟ್ಟು ಹೋಗಿದ್ದರು.

ಮದುವೆ ಮುಗಿಸಿಕೊಂಡು ಸಂಜೆ ವಾಪಸ್ ಬಂದು ಮನೆಯ ಬೀಗವನ್ನು ತೆಗೆದು ನೋಡಿದಾಗ, ಬೀರುವಿನ ಬೀಗ ತೆಗೆದಿತ್ತು. ಬೀರುವಿನಲ್ಲಿಟ್ಟಿದ್ದ ₹ 6 ಲಕ್ಷ ಮೌಲ್ಯದ 131 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಹಾಗೂ 40 ಗ್ರಾಂ ಬೆಳ್ಳಿಯ ಆಭರಣ ಕಳವಾಗಿರುವುದು ಗೊತ್ತಾಗಿದೆ. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ಳಿ, ನಗದು ಇದ್ದ 2 ಲಾಕರ್‌ ಕಳವು

ಹಾಸನ: ಇಲ್ಲಿನ ಶಾಂತಿನಗರದ ಮನೆಯ ಬೀಗ ಮುರಿದು ಬೆಳ್ಳಿಯ ಆಭರಣ ಹಾಗೂ ನಗದು ಇದ್ದ ಎರಡು ಲಾಕರ್‌ಗಳನ್ನು ಕಳವು ಮಾಡಲಾಗಿದೆ.

ಅವಿನಾಶ್ ಗೆರ್ಲಾಡ್ ಅವರು ಮನೆಗೆ ಬೀಗ ಹಾಕಿ ಕುಟುಂಬ ಸಮೇತ ತಮ್ಮ ಊರಾದ ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ದಾಸಪುರಕ್ಕೆ ಹೋಗಿದ್ದರು. ಸ್ನೇಹಿತರಾದ ಗಣೇಶ್ ಎಂಬುವವರು ಗೃಹಪ್ರವೇಶದ ಆಮಂತ್ರಣ ಪತ್ರಿಕೆ ಕೊಡಲು ಅವಿನಾಶ್‌ ಅವರ ಮನೆಗೆ ಬಂದಿದ್ದು, ಮನೆಗೆ ಬಾಗಿಲು ಒಡೆದಿರುವುದನ್ನು ನೋಡಿದ್ದಾರೆ. ಕೂಡಲೇ ಕರೆ ಮಾಡಿ, ಅವಿನಾಶ್‌ ಅವರಿಗೆ ವಿಷಯ ತಿಳಿಸಿದ್ದಾರೆ.

ಮನೆಗೆ ಬಂದು ನೋಡಿದಾಗ, ಮನೆಯ ನೆಲ ಅಂತಸ್ತಿನ ಕಪಾಟಿನಲ್ಲಿದ್ದ ₹ 10ಸಾವಿರ ಮೌಲ್ಯದ ಒಂದು ಚಿಕ್ಕ ಲಾಕರ್‌ ಹಾಗೂ ಮೊದಲನೇ ಮಹಡಿಯ ರೂಮ್‌ನಲ್ಲಿದ್ದ ₹ 25 ಸಾವಿರ ಮೌಲ್ಯದ ದೊಡ್ಡ ಲಾಕರ್‌ ಕಳವು ಮಾಡಿರುವುದು ಗೊತ್ತಾಗಿದೆ. ಲಾಕರ್‌ಗಳಲ್ಲಿದ್ದ ₹5 ಸಾವಿರ ನಗದು, ₹1.40 ಲಕ್ಷ ಮೌಲ್ಯದ 2 ಕೆ.ಜಿ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿದೆ.

ಪೆನ್ಷನ್‌ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT