ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು|ಗೋಣಿಸೋಮನಹಳ್ಳಿ: ಪಿಂಚಣಿ ಆದಾಲತ್

Published 4 ಜೂನ್ 2023, 14:26 IST
Last Updated 4 ಜೂನ್ 2023, 14:26 IST
ಅಕ್ಷರ ಗಾತ್ರ

ಹಳೇಬೀಡು: ಗೋಣಿಸೋಮನಹಳ್ಳಿಯಲ್ಲಿ ಶನಿವಾರ ಕೋಡಿಹಳ್ಳಿ ಕಂದಾಯ ವೃತ್ತದ ಪಿಂಚಣಿ ಆದಾಲತ್ ನಡೆಯಿತು.

ತಹಶೀಲ್ದಾರ್ ಎಂ.ಮಮತ ನೇತೃತ್ವದಲ್ಲಿ ನಡೆದ ಆದಾಲತ್‌‌‌ನಲ್ಲಿ 19 ವೃದ್ದಾಪ್ಯ, ವಿಧವಾ ವೇತನ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಮಂಜೂರಾತಿ ಪತ್ರ ನೀಡಲಾಯಿತು. ತಹಶೀಲ್ದಾರ್ ಮಮತಾ ಹೊಸ ಅರ್ಜಿಗಳ ಪರಿಶೀಲನೆ ನಡೆಸಿದರು. ಸಮರ್ಪಕ ದಾಖಲಾತಿ ಇರುವವರಿಗೆ ವೇತನ ಮಂಜೂರು ಮಾಡಿಕೊಡಲು ರಾಜಸ್ವ ನಿರೀಕ್ಷಕ ಹಾಗೂ ಗ್ರಾಮಲೆಕ್ಕಿಗರಿಗೆ ಸೂಚಿಸಿದರು.

‘ಪಿಂಚಣಿ ಅರ್ಜಿಗಳನ್ನು ತಡ ಮಾಡದೆ ಪರಿಶೀಲನೆ ನಡೆಸಬೇಕು. ಅರ್ಹರಿಗೆ ಬೇಗ ಪಿಂಚಣಿ ಮಂಜೂರು ಮಾಡಿಸಬೇಕು’ ಎಂದರು.

‘ವೃದ್ದ, ವಿಧವೆ ಹಾಗೂ ಅಂಗವಿಕಲರು ಪಿಂಚಣಿಗಾಗಿ ಅಲೆದಾಡಬಾರದು. ಸೂಕ್ತ ದಾಖಲಾತಿ ಇದ್ದವರಿಗೆ ಪಿಂಚಣಿ ಮಂಜೂರಾತಿ ವಿಳಂಬವಾದರೆ ನಮಗೆ ತಿಳಿಸಬೇಕು. ಕಚೇರಿ ಸಿಬ್ಬಂದಿ ಹಾಗೂ ಮಧ್ಯವರ್ತಿಗಳಿಗೆ ಯಾರೂ ಹಣ ಕೊಡಬಾರದು’ ಎಂದು ತಹಶಿಲ್ದಾರ್ ಮಮತ ಹೇಳಿದರು.

ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಕಂದಾಯ ಇಲಾಖೆ ಸೌಲಭ್ಯಗಳ ಕುರಿತು ಪ್ರಶ್ನೆ ಕೇಳಿ ಮಾಹಿತಿ ಪಡೆದುಕೊಂಡರು. ಕೋಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪ ಅಂಬರೀಶ್, ಗೋಣಿಸೋಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ, ರಾಜಸ್ವ ನಿರೀಕ್ಷಕ ಲೀಲಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT