ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅರಸೀಕೆರೆ | ಜಲ್ಲಿ ರಸ್ತೆ: ನಡೆಯಲು ದುಸ್ತರ

7–8 ತಿಂಗಳಿಂದ ನಿಂತಲ್ಲಿಯೇ ನಿಂತ ರಸ್ತೆ ಕಾಮಗಾರಿ: ನಾಗರಿಕರ ಪರದಾಟ
ಪೂಜಾರು ರಮೇಶ್‌
Published 26 ಜೂನ್ 2024, 5:18 IST
Last Updated 26 ಜೂನ್ 2024, 5:18 IST
ಅಕ್ಷರ ಗಾತ್ರ

ಅರಸೀಕೆರೆ: ಆರಂಭವಾಗಿ ಏಳೆಂಟು ತಿಂಗಳು ಕಳೆದರೂ ಕಾಮಗಾರಿ ಮುಕ್ತಾಯವಾಗದೇ ನಗರದ ನಾಗರಿಕರು ನಿತ್ಯ ನರಕಯಾತನೆ ಅನುಭವಿಸುವಂಥಾಗಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರೋತ್ಥಾನ ಯೋಜನೆಯಡಿ ಕಾಮಗಾರಿಗಾಗಿ ಬಿಡುಗಡೆಯಾದ ₹ 5 ಕೋಟಿಯಲ್ಲಿ ನಗರದ ಕೆಲವು ಬಡಾವಣೆಗಳಲ್ಲಿ ರಸ್ತೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿನ ಮಾರುತಿ ನಗರ ಬಡಾವಣೆಯ ಜೆಪಿಎನ್ ಲೇಔಟ್‌ನ ಮುಖ್ಯ ರಸ್ತೆಗಳಿಗೆ ಜಲ್ಲಿ ಹರಡಲಾಗಿದೆ. 7-8 ತಿಂಗಳಾದರೂ ಯಾವುದೇ ದುರಸ್ತಿ ಕಾರ್ಯ ನಡೆಯದೇ ಸಾರ್ವಜನಿಕರು ನಿತ್ಯ ತೊಂದರೆ ಎದುರಿಸುವಂತಾಗಿದೆ.

ಜಲ್ಲಿಯನ್ನು ಹಾಕಿ 7-8 ತಿಂಗಳಾಗಿವೆ. ಜಲ್ಲಿಯ ಮೇಲೆ ಜನರು ಓಡಾಡಲು ಹೇಗೆ ಸಾಧ್ಯ? ಈ ನರಕ ಅನುಭವಿಸಲು ನಮಗೆ ಯಾವ ಗ್ರಹಚಾರ. ಇದಕ್ಕಿಂತ ಹಳೆಯ ರಸ್ತೆ ಉತ್ತಮವಾಗಿತ್ತು ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ರಸ್ತೆಯ ಮೇಲೆ ಜಲ್ಲಿಕಲ್ಲುಗಳನ್ನು ಹರಡಿರುವುದರಿಂದ ಮಕ್ಕಳು, ವಯೋವೃದ್ದರು ಓಡಾಡಲು ಕಷ್ಟಕರವಾಗಿದೆ. ವಾಹನ ಸವಾರರೂ ಬಹಳ ಎಚ್ಚರಿಕೆ ಯಿಂದ ಚಲಾಯಿಸಬೇ ಕಾಗಿದೆ. ಕೂಡಲೇ ಸಂಬಂ ಧಪಟ್ಟ ಅಧಿಕಾರಿಗಳು ಗುತ್ತಿಗೆದಾರರು ರಸ್ತೆಯನ್ನು ಮಾಡಬೇಕು. ಇಲ್ಲವೇ ಜಲ್ಲಿಕಲ್ಲುಗಳ ಮೇಲೆ ಮಣ್ಣಾನ್ನಾದರೂ ಹಾಕಿಕೊಡಬೇಕು.

ಜನರು, ವಾಹನಗಳು ಅಲ್ಲಿ ತಿರುಗಾಡುವುದೇ ದುಸ್ತರವಾಗಿದೆ ಸದ್ಯಕ್ಕೆ ನಮ್ಮ ಮನೆ ಬಾಗಿಲಿಗೆ ಮಣ್ಣನ್ನಾದರೂ ಮುಚ್ಚಿಕೊಡಿ ಎಂದು ನಗರಸಭೆಗೆ ದುಂಬಾಲು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಜನಪ್ರತಿನಿಧಿಗಳು, ಸಾರ್ವಜನಿಕರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು. ಕಾಮಗಾರಿ ನಿರಂತರವಾಗಿ ಮಾಡದಿರುವ ಬಗ್ಗೆ ಸಂಬಂಧಿಸಿದ ಹಿರಿಯ ಎಂಜಿನಿಯರ್‌ಗಳು, ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಬೇಕು ಎಂಬುದು ನಾಗರಿಕರ ಒತ್ತಾಯ.

ನಗರಸಭೆ ಅಧ್ಯಕ್ಷರಿಗೆ ಮೊರೆ ಹೋಗೋಣವೆಂದರೆ ಅಧ್ಯಕ್ಷರು ಇಲ್ಲ. ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಆಗಾಗ್ಗೆ ಬಂದು ಜನರ ಸಮಸ್ಯೆ ವಿಚಾರಿಸಬೇಕಿತ್ತು. ಎಂದೋ ಒಂದು ಬಾರಿ ಬಂದು ಹೋದರೆ ಸಾಕೆ? ಅವರ ಪ್ರತಿನಿಧಿಯನ್ನಾದರೂ ನಗರಸಭೆಗೆ ಕಳಿಸಿಕೊಡಬೇಕು. ಸಾರ್ವಜನಿಕ ಸಮಸ್ಯೆಗಳನ್ನು ಅವಲೋಕಿಸಿ ಜಿಲ್ಲಾಧಿಕಾರಿಗೆ ಮನವರಿಕೆ ಮಾಡು ವಂತಾಗಬೇಕು ಎನ್ನುತ್ತಾರೆ ನಾಗರಿಕರು.

ಜಿಲ್ಲಾಧಿಕಾರಿ ಮಾರುತಿ ನಗರದ ವಿವಿಧ ಬಡಾವಣೆಯ ರಸ್ತೆಗಳಿಗೆ ಭೇಟಿ ನೀಡಿ, ಮಾರುತಿನಗರದ ನಿವಾಸಿಗಳು ಅನುಭವಿಸುತ್ತಿರುವ ಸಂಕಟವನ್ನು ಖುದ್ದು ಪರಿಶೀಲಿಸಬೇಕು.
ಶಿವಮೂರ್ತಿ, ಮಾರುತಿ ನಗರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT