ಹಾಸನ: ತಂಬಾಕು ಬೆಳೆಗಾರರ ಹಿತ ಕಾಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ತಂಬಾಕು ಬೆಳೆಗಾರರು ಪ್ರತಿಭಟನೆ ನಡೆಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ರಘು ಮಾತನಾಡಿ, ಭಾರತ ತಂಬಾಕು ಮಂಡಳಿ 1975ರ ಅಧಿನಿಯಮದ ಅಡಿಯಲ್ಲಿ ಸ್ಥಾಪನೆಯಾಗಿದ್ದು, ತಂಬಾಕು ಉತ್ಪಾದನೆ, ರಫ್ತು, ಮಾರುಕಟ್ಟೆ ನಿಯಂತ್ರಣ ಮತ್ತು ಬೆಳೆ ನಿಯಂತ್ರಣದ ಜವಾಬ್ದಾರಿ ಹೊಂದಿದೆ. 2025–26 ಸಾಲಿಗೆ 10 ಕೋಟಿ ಕೆ.ಜಿ. ತಂಬಾಕು ಬೆಳೆಗೆ ಅನುಮತಿ ನೀಡಲಾಗಿತ್ತು. ಆದರೆ ಮೇ, ಜೂನ್ ಹಾಗೂ ಜುಲೈನಲ್ಲಿ ಸುರಿದ ನಿರಂತರ ಮಳೆಯಿಂದಾಗಿ ರಾಜ್ಯದಲ್ಲಿ ಕೇವಲ 8.5 ಕೋಟಿ ಕೆ.ಜಿ. ಉತ್ಪಾದನೆಯಾಗುವ ಸಾಧ್ಯತೆ ಇದೆ ಎಂದರು.

ಮೈಸೂರು ವಲಯದ ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ರೈತರು ತಂಬಾಕು ಬೆಳೆಯುತ್ತಿದ್ದು, 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ವಾಣಿಜ್ಯ ಬೆಳೆ ಬೆಳೆಯಲಾಗುತ್ತಿದೆ. ಅಧಿಕ ಉತ್ಪಾದನೆಯ ಪರಿಣಾಮವಾಗಿ ಕರ್ನಾಟಕದ ಹರಾಜು ಮಾರುಕಟ್ಟೆಗೆ ನೇರ ಹೊಡೆತ ಬಿದ್ದಿದ್ದು, ಕಂಪನಿಗಳು ರಾಜ್ಯದ ತಂಬಾಕು ಖರೀದಿಸಲು ಆಸಕ್ತಿ ತೋರುತ್ತಿಲ್ಲ. ಉತ್ಪಾದನಾ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಕೆ.ಜಿ. ತಂಬಾಕಿಗೆ ಕನಿಷ್ಠ ₹ 350 ಬೆಲೆ ಅಗತ್ಯವಿದೆ ಎಂದು ಒತ್ತಾಯಿಸಿದರು.

2024–25ರಲ್ಲಿ ಕಂಪನಿಗಳು ಸರಾಸರಿ ₹ 250 ಕ್ಕೆ ಮಾತ್ರ ತಂಬಾಕು ಖರೀದಿಸಿದ್ದು, ಉತ್ಪಾದನಾ ವೆಚ್ಚ ತೆಗೆದ ನಂತರ ರೈತರಿಗೆ ಅಲ್ಪ ಲಾಭವಾಗಿದೆ. ಇತ್ತ ಆಂಧ್ರಪ್ರದೇಶದ ರಾಜಮಂಡ್ರಿ ಮತ್ತು ಒಂಗೋಲ್ ಪ್ರದೇಶಗಳಲ್ಲಿ ಹೆಚ್ಚಿನ ಬೆಲೆಗೆ ತಂಬಾಕು ಖರೀದಿಸಿರುವುದರಿಂದ ಕರ್ನಾಟಕದ ರೈತರಿಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತುತ ಹರಾಜಿನಲ್ಲಿ ಕರ್ನಾಟಕ ತಂಬಾಕಿಗೆ ನ್ಯಾಯಸಮ್ಮತ ಮತ್ತು ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಅಧಿಕ ಉತ್ಪಾದನೆಯಿಂದ ಉಂಟಾಗುತ್ತಿರುವ ಅಸಮತೋಲನ ಸರಿಪಡಿಸಲು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.

ರೈತ ಮುಖಂಡರಾದ ಶಾಂತರಾಜ ಅರಸು, ದಶರಥ, ನರಸಿಂಹ ಶೆಟ್ಟಿ, ಆನಂದ್, ಸೋಮಶೇಖರ್, ರವಿ, ನವೀನ್, ಜಗದೀಶ್, ಶ್ರೀನಿವಾಸ್, ಶಿವಣ್ಣ, ಮಲ್ಲೇಶ್, ನಾಗೇಗೌಡ, ಕರೀಗೌಡ, ಜವರೇಗೌಡ, ಚಂದ್ರು ಸೇರಿದಂತೆ ತಂಬಾಕು ಬೆಳೆಗಾರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.