ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ದರ್ಶನಕ್ಕೆ ಮೂರು ತಾಸು ಕಾದ ಭಕ್ತರು

ಹಾಸನಾಂಬೆ ದೇವಾಲಯಕ್ಕೆ ಹರಿದು ಬಂದ ಜನಸಾಗರ
Last Updated 5 ನವೆಂಬರ್ 2021, 5:45 IST
ಅಕ್ಷರ ಗಾತ್ರ

ಹಾಸನ: ಹಾಸನಾಂಬ ಸಾರ್ವಜನಿಕ ದರ್ಶನಕ್ಕೆ ಒಂದು ದಿನ ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಗುರುವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಆದರೆ ರಾತ್ರಿ ನಗರದಲ್ಲಿ ಸುರಿದ ಮಳೆ ದರ್ಶನಕ್ಕೆ ಅಡ್ಡಿಉಂಟು ಮಾಡಿತು.

ಮುಂಜಾನೆ 5 ಗಂಟೆಯಿಂದಲೇ ಜನರು ಸರದಿ ಸಾಲಿನಲ್ಲಿ ನಿಂತಿದ್ದರು. ಸಾವಿರ ಹಾಗೂ ಮುನ್ನೂರುರೂಪಾಯಿ ನೇರ ದರ್ಶನದ ಟಿಕೆಟ್‌ಗಳು ಹೆಚ್ಚು ಮಾರಾಟವಾದವು. ನಾಲ್ಕು ದಿನಗಳಿಂದ ನಿರೀಕ್ಷೆಗೂ ಮೀರಿಭಕ್ತರು ಭೇಟಿ ನೀಡುತ್ತಿದ್ದು, ರಾಜಕಾರಣಿಗಳು, ಗಣ್ಯರು, ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ.

ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳ ಶಿಫಾರಸು ಪಡೆದ ಸಾಕಷ್ಟು ಜನ ದೇವಸ್ಥಾನ ಪ್ರವೇಶಿಸುತ್ತಿರುವುದು ಪೊಲೀಸರಿಗೆ ತಲೆ ನೋವಾಗಿದೆ. ಸಾರ್ವಜನಿಕರು ತಾಸು ಗಟ್ಟಲೇ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಗುರುವಾರ ದೇವಿ ದರ್ಶನಕ್ಕೆ ಮೂರು, ನಾಲ್ಕು ತಾಸು ಕಾಯಬೇಕಾಯಿತು. ಕೆಲವರು ಆಯಾಸಗೊಂಡು ನೆಲದಲ್ಲಿ ಕುಳಿತು ವಿಶ್ರಾಂತಿ ಪಡೆದರು.

ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜೀವರಾಜ್‌,ಮುಖಂಡ ನೆ.ಲ.ನರೇಂದ್ರಬಾಬು, ನಟ ರವಿಚಂದ್ರನ್‌ ಅವರ ಪುತ್ರ ಮನರಂಜನ್‌, ರಚಿತಾ ರಾಮ್‌, ಶಂಕರ್‌ ಅಶ್ವಥ್‌, ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ, ಮೀನುಗಾರಿಕೆ ಸಚಿವ ಅಂಗಾರ, ರಾಜ್ಯ ಚುನಾವಣಾ ಆಯುಕ್ತ ಬಿ.ಬಸವರಾಜ್ ಸೇರಿದಂತೆ ಇತರೆ ಗಣ್ಯರು ದೇವಿ ದರ್ಶನ ಪಡೆದರು.

ಸಿ.ಎಂ.ರಾಜಕೀಯ ಕಾರ್ಯದರ್ಶಿ ಜೀವರಾಜ್ ಮಾತನಾಡಿ, ‘ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 9 ವರ್ಷ ಆಗಿದೆ. 9 ವರ್ಷದಲ್ಲಿ ಇಂಧನ ಮಾತ್ರವಲ್ಲಎಲ್ಲಾ ವಸ್ತುಗಳ ಬೆಲೆಗಳು ಏರಿದೆ. ಅಡಿಕೆಗೆ ₹ 25 ಸಾವಿರ ಇತ್ತು. ಈಗ ₹68 ಸಾವಿರ ಆಗಿದೆ.ಎಲ್ಲಾ ಬೆಳೆಗಳ ಬೆಲೆಯೂ ಹೆಚ್ಚುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT