ಹಿರೀಸಾವೆ: ಹಾಸನ, ಚನ್ನರಾಯಪಟ್ಟಣದ ಕಡೆಗೆ ಶನಿವಾರ ಬೆಳಿಗ್ಗೆ 10 ಗಂಟೆ ತನಕ ಬಸ್ಗಳ ಸಂಚಾರ ಇಲ್ಲದೆ, ಹಿರೀಸಾವೆಯ ಶ್ರೀಕಂಠಯ್ಯ ವೃತ್ತದಲ್ಲಿ ವಿದ್ಯಾರ್ಥಿಗಳು, ನೌಕರರು, ಸಾರ್ವಜನಿಕರು ಬಸ್ಗಳಿಗಾಗಿ ಗಂಟೆಗಟ್ಟಲೆ ಕಾಯಬೇಕಾಯಿತು.

ಇಲ್ಲಿಂದ ಸಾವಿರಾರು ವಿದ್ಯಾರ್ಥಿಗಳು, ನೂರಾರು ನೌಕರರು ಚನ್ನರಾಯಟಪಟ್ಟಣ, ಹಾಸನಕ್ಕೆ ಪ್ರಯಾಣ ಮಾಡುತ್ತಾರೆ. ಪ್ರತಿದಿನ 5 ನಿಮಿಷಕ್ಕೆ ಒಂದು ಬಸ್ ಹಾಸನ ಕಡೆಗೆ ಸಂಚರಿಸುತ್ತವೆ. ಆದರೆ ಶನಿವಾರ ಗಂಟೆಗೊಂದು ಬಸ್ ಎನ್ಎಚ್ 75 ರಲ್ಲಿ ಬರಲಿಲ್ಲ. ಬೆಳಿಗ್ಗೆ 7ಕ್ಕೆ ನಿಲ್ದಾಣಕ್ಕೆ ಬಂದವರಿಗೆ 9 ಗಂಟೆಯಾದರು ಬಸ್ ಇಲ್ಲದೆ, ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳು ಶನಿವಾರದ ಬೆಳಗ್ಗಿನ ತರಗತಿಗಳಿಗೆ ಹಾಜರಾಗಲಿಲ್ಲ. ಕೆಲವರು ಆಟೊ ಮತ್ತು ಖಾಸಗಿ ವಾಹನಗಳಲ್ಲಿ ಪ್ರಯಾಣ ಮಾಡಿದರು. ನೌಕರರು ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೋಗಲು ಆಗದೆ ಬಸ್ಗಾಗಿ ಗಂಟೆಗಟ್ಟಲೆ ಕಾಯುತ್ತಿದ್ದರು. 9.30ರ ನಂತರ ಆಗೊಂದು–ಈಗೊಂದು ಬಸ್ಗಳು ಬಂದವು. ಅವುಗಳು ಅಲ್ಲಿಂದಲೇ ಪ್ರಯಾಣಿಕರಿಂದ ತುಂಬಿದ್ದವು. ನೂಕುನುಗ್ಗಲಿನಲ್ಲಿ ಕೆಲವರು ಬಸ್ ಹತ್ತಿದರೇ, ವೃದ್ಧರು, ರೋಗಿಗಳು ಬಸ್ ಹತ್ತಲಾಗದೆ ಅಲ್ಲೆ ಉಳಿದರು.

ಹಾಸನಾಂಬ ದೇವಿಯ ದರ್ಶನಕ್ಕೆ ಬೆಂಗಳೂರಿನಿಂದ ಬರುವ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಿಂದ, ಶನಿವಾರ ಬೆಳಗ್ಗೆವರೆಗೆ ಬೆಂಗಳೂರಿನಿಂದ ಹಾಸನಕ್ಕೆ ಬರುವ ಬಸ್ಗಳನ್ನು ತಾತ್ಕಲಿಕವಾಗಿ ನಿಲ್ಲಿಸಲ್ಲಾಗಿತ್ತು. ಬೆಂಗಳೂರಿನಿಂದ ಹಾಸನಕ್ಕೆ ಕೆಲವು ತಡೆರಹಿತ ಬಸ್ಗಳು ಮೇಲು ಸೇತುವೆ (ಪ್ಲೈ ಓವರ್) ಮೇಲೆ ಸಂಚಾರ ಮಾಡಿದವು. ಹಾಸನಾಂಬ ಜಾತ್ರೆಯ ಬಿಸಿ, ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಪ್ರಯಾಣ ಮಾಡುವವರಿಗೂ ಶನಿವಾರ ತಟ್ಟಿತ್ತು.

ಗಂಟೆಗಟ್ಟಲೆ ಕಾದರೂ ಬಾರದ ಬಸ್ ಬಸ್ಗಾಗಿ ವಿದ್ಯಾರ್ಥಿಗಳ ಪರದಾಟ ಕರ್ತವ್ಯಕ್ಕೆ ತಡವಾಗಿ ಹೋದ ನೌಕರರು