ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಹೋಟೆಲ್‌ ಆರಂಭ

ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಲು ಪೌರಾಯುಕ್ತ ಕಟ್ಟುನಿಟ್ಟಿನ ಸೂಚನೆ
Last Updated 8 ಜೂನ್ 2020, 6:01 IST
ಅಕ್ಷರ ಗಾತ್ರ

ಹಾಸನ: ಸರ್ಕಾರದ ಮಾರ್ಗಸೂಚಿಯಂತೆ ಜೂನ್‌ 8 ರಿಂದ ಜಿಲ್ಲೆಯಲ್ಲಿ ಹೋಟೆಲ್ ಹಾಗೂ ರೆಸ್ಟೋರೆಂಟ್ ಬಾಗಿಲು ತೆಗೆಯಲು ಅವಕಾಶ ನೀಡಿದ್ದು, ಸರ್ಕಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿಸೂಚನೆ ನೀಡಿದರು.

ನಗರದ ಸಂತೇಪೇಟೆಯಲ್ಲಿರುವ ನಗರಸಭೆ ಕಚೇರಿ ಕುವೆಂಪು ಸಭಾಂಗಣದಲ್ಲಿ ಭಾನುವಾರ ಕರೆದಿದ್ದ ಕ್ಯಾಂಟಿನ್, ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಭೆಯಲ್ಲಿ ಮಾತನಾಡಿ, ಕೋವಿಡ್-19 ಲಾಕ್‌ಡೌನ್‍ನ್ನು ಸರ್ಕಾರ ಹಂತ ಹಂತವಾಗಿ ಸಡಿಲಗೊಳಿಸುತ್ತಿದ್ದು, ಸೋಮವಾರದಿಂದ ಹೋಟೆಲ್‍ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಹೋಟೆಲ್‍ಗೆ ಬರುವ ಪ್ರತಿಯೊಬ್ಬ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್‌ ಮತು ಕೈ ತೊಳೆದುಕೊಳ್ಳುವ ಬಗ್ಗೆ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡುವುದು. ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಿಲ್ಲಿ ಲಭ್ಯವಿರುವ ಟೇಬಲ್‍ಗಳಿಗೆ ಅನುಗುಣವಾಗಿ ಶೇ. 50 ರಷ್ಟು ಮಾತ್ರ ಗ್ರಾಹಕರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು. ಬಫೆ ಪದ್ದತಿಯಿದ್ದರೆ ಗ್ರಾಹಕರು ನಿಂತುಕೊಳ್ಳಲು ಬಾಕ್ಸ್‌ಗಳನ್ನು ಮಾರ್ಕ್ ಮಾಡಬೇಕು. ಹೋಟೆಲ್‍ನಲ್ಲಿ ಕಡ್ಡಾಯವಾಗಿ ಹೊರಭಾಗದ ರಸ್ತೆ ಕಾಣುವಂತೆ ಒಳಭಾಗದಲ್ಲಿ ಸಿ.ಸಿ ಟಿವಿ ಕ್ಯಾಮರಾ ಅಳವಡಿಸಬೇಕು ಎಂದು ತಿಳಿಸಿದರು.

ಅಂತರ ಕಾಪಾಡುವ ಬಗ್ಗೆ ಹೋಟೆಲ್ ಮಾಲೀಕರು ಸ್ವಯಂ ಸೇವಕರನ್ನು ನಿಯೋಜಿಸಿಕೊಂಡು ಗ್ರಾಹಕರಿಗೆ ತಿಳಿವಳಿಕೆನೀಡಬೇಕು. ಅಂತರ
ವನ್ನು ಕಾಪಾಡದೇನಿರ್ಲಕ್ಷ್ಯ ತೋರುವುದು ಕಂಡುಬಂದಲ್ಲಿ ಅಂಥ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ಮಾಲೀಕರು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT