ನುಗ್ಗೇಹಳ್ಳಿ: ಹೋಬಳಿಯ ರಾಯಸಮುದ್ರ ಕೆರೆಯಿಂದ ಪೈಪ್ಲೈನ್ ಮೂಲಕ ಹುಲ್ಲೇನಹಳ್ಳಿ ಕೆರೆಗೆ ಸೆ.20ರೊಳಗೆ ನೀರು ಹರಿಸಲಾಗುತ್ತದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಭರವಸೆ ನೀಡಿದರು.

ಹೋಬಳಿಯ ಹುಲ್ಲೇನಹಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ₹65 ಲಕ್ಷ ವೆಚ್ಚದಲ್ಲಿ ಮಂಜೂರಾಗಿದ್ದ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

‘ಅನೇಕ ವರ್ಷಗಳಿಂದ ಗ್ರಾಮದ ಕೆರೆಗೆ ರಾಯಸಮುದ್ರ ಕಾವಲು ಕೆರೆಯಿಂದ ಪೈಪ್ಲೈನ್ ಅಳವಡಿಕೆ ಮಾಡಿ ನೀರೆತ್ತುವ ಮೋಟರ್ ಸಹಾಯದಿಂದ ಕೆರೆಗೆ ನೀರು ಹರಿಸಲು ಈಗಾಗಲೇ ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 60 ಮೀಟರ್ ಪೈಪ್ಲೈನ್ ಅಳವಡಿಕೆ ಹಾಗೂ ನೀರೆತ್ತುವ ಮೋಟರ್ ಶೀಘ್ರ ಅಳವಡಿಸಿ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಇದರ ಜೊತೆಗೆ ತಿಪಟೂರು-ನುಗ್ಗೇಹಳ್ಳಿ ಮುಖ್ಯ ರಸ್ತೆಯಿಂದ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗೆ ಶೀಘ್ರ ಅನುದಾನ ನೀಡಲಾಗುತ್ತದೆ’ ಎಂದರು.

‘ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಸಮುದಾಯ ಭವನದ ಸುತ್ತ ಕಾಂಪೌಂಡ್ ಹಾಗೂ ವಿದ್ಯುತ್ ಸಂಪರ್ಕದ ಕಾಮಗಾರಿ ಪೂರ್ಣಗೊಂಡ ನಂತರ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗುತ್ತದೆ. ಜೊತೆಗೆ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಕಾಂಕ್ರೀಟ್ ರಸ್ತೆ ಒಳಚರಂಡಿ ನಿರ್ಮಾಣಕ್ಕೆ ಮುಂಬರುವ ಆರ್ಥಿಕ ವರ್ಷದಲ್ಲಿ ಅನುದಾನ ಒದಗಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಯಾದವ ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಹುಲ್ಲೇನಹಳ್ಳಿ ನಾರಾಯಣ ಮಾತನಾಡಿ, ‘ಗ್ರಾಮದ ಕೆರೆಯನ್ನು ತುಂಬಿಸಲು ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಅವರು ವೈಯಕ್ತಿಕವಾಗಿ ಹಣ ಖರ್ಚು ಮಾಡಿ ಪೈಪ್ ಹಾಗೂ ಟಿಸಿ ಹಾಗೂ ಮೋಟರ್ ಕೊಡಿಸಿದ್ದಾರೆ’ ಎಂದರು.

ಆರೋಗ್ಯ ಇಲಾಖೆ ಮುಖ್ಯ ಎಂಜಿನಿಯರ್ ರಶ್ಮಿ, ಸಹಾಯಕ ಎಂಜಿನಿಯರ್ ಪುಟ್ಟಸ್ವಾಮಿ, ಗುತ್ತಿಗೆದಾರ ದಿವಾಕರ್, ಗ್ರಾ.ಪಂ. ಅಧ್ಯಕ್ಷ ಎನ್.ಎಸ್. ಮಂಜುನಾಥ್, ಸದಸ್ಯೆ ಕಮಲಾಕ್ಷಿ ಗಿರೀಶ್, ಮುಖಂಡರಾದ ಎಚ್. ಎಂ. ನಟರಾಜ್, ದೊರೆಸ್ವಾಮಿ, ತೋಟಿ ನಾಗರಾಜ್, ಹುಲಿಕೆರೆ ಸಂಪತ್ ಕುಮಾರ್, ಜಯಲಿಂಗೇಗೌಡ, ಪುಟ್ಟಸ್ವಾಮಿ, ಕುಳ್ಳೇಗೌಡ, ದುಗ್ಗೇನಹಳ್ಳಿ ವೀರೇಶ್, ಎಂ.ಎಸ್. ಸುರೇಶ್, ಗೋಪಾಲ, ರಾಮಕೃಷ್ಣ, ಧರ್ಮರಾಜ್, ರಂಗಪ್ಪ, ಇಂದ್ರೇಶ್, ರಂಗಸ್ವಾಮಿ, ಭರತ್ ಯಾದವ್, ಅಮಾಸಯ್ಯ, ಲೋಕೇಶ್, ತಿಮ್ಮಯ್ಯ, ಗಿರೀಶ್, ಒಂಟಿ ಮಾವಿನಹಳ್ಳಿ ಜಯರಾಮ್, ರಂಗಯ್ಯ, ಎಚ್. ಆರ್. ರವಿ, ವಸಂತ ಸುರೇಶ್, ಯೋಗೇಶ್, ಲೋಕೇಶ್ ಸೊಂಬೇಗೌಡ, ರಾಜೇಶ್, ರಂಗಸ್ವಾಮಿ, ಬಸವರಾಜ್, ರಾಮಲಿಂಗಯ್ಯ, ಶರತ್ ಯಾದವ್, ಎಚ್.ಎಸ್. ಸುರೇಶ್, ಜಗದೀಶ್, ಲಿಂಗರಾಜು, ಶಿವಗಂಗಯ್ಯ, ವೀರಭದ್ರಯ್ಯ, ಧನಂಜಯ, ಪ್ರಕಾಶ್, ರಮೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.