ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನ ಬಳಿ‌ ಅಕ್ರಮ ಆಸ್ತಿ ಇದ್ದರೆ ಉಚಿತವಾಗಿ ಕೊಡುವೆ: ಎಚ್.ಡಿ. ರೇವಣ್ಣ

Published : 14 ಆಗಸ್ಟ್ 2024, 14:10 IST
Last Updated : 14 ಆಗಸ್ಟ್ 2024, 14:10 IST
ಫಾಲೋ ಮಾಡಿ
Comments

ಹಾಸನ: ‘ನನ್ನ ಬಳಿ ‌ಅಕ್ರಮ ಆಸ್ತಿಗಳಿದ್ದರೆ ಋಜುವಾತು ಮಾಡಲಿ. ಉಚಿತವಾಗಿ ಕೊಡುವೆ, ತೆಗೆದುಕೊಳ್ಳಲಿ’ ಎಂದು ಶಾಸಕ ಎಚ್.ಡಿ. ರೇವಣ್ಣ ಸವಾಲು ಹಾಕಿದರು.

‘ದೇವೇಗೌಡರ ಕುಟುಂಬದ ಅಕ್ರಮ ಆಸ್ತಿ ಬಯಲಿಗೆ ಎಳೆಯುತ್ತೇನೆ’ ಎಂಬ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ಬುಧವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ‘ಬಾಲಕೃಷ್ಣಗೌಡ ಅವರದ್ದೇ ಪ್ರತ್ಯೇಕ ವ್ಯವಹಾರವಿದೆ. ನಮ್ಮದೂ ವ್ಯವಹಾರವಿದೆ. ಅದಕ್ಕೆ ಅವರನ್ನು ಕೇಳಬೇಕೇ? ಯಾವುದೇ ತನಿಖೆ ಮಾಡಿದರೂ ಸಿದ್ಧ’ ಎಂದರು.

‘ಬಾಲಕೃಷ್ಣಗೌಡ ಅವರು ಸರ್ಕಾರಿ ಹುದ್ದೆಯಿಂದ ನಿವೃತ್ತಿಯಾಗಿ 8 ವರ್ಷದ ಬಳಿಕ ತನಿಖೆ ನಡೆಸಿ, ದ್ವೇಷದ ರಾಜಕೀಯ ಮಾಡಿದ್ದಾರೆ. ನನಗೆ ದೇವರು, ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ವಿಧಾನಸಭೆ ನನಗೆ ದೇವಾಲಯ ಇದ್ದಂತೆ. ಎಲ್ಲವನ್ನೂ ಅಲ್ಲೇ ವಿವರಿಸುತ್ತೇನೆ’ ಎಂದರು.

‘ಹಾಸನಾಂಬ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಗೆ ನನ್ನನ್ನು ಆಹ್ವಾನಿಸಿಲ್ಲ. ಅವರ ಯಜಮಾನರನ್ನು ಕೂರಿಸಿಕೊಂಡು ಸಭೆ, ಪೂಜೆ ಮಾಡಲಿ. ಪುಣ್ಯಕೋಟಿ ಕಥೆ ಹೇಳುವವರು ಅವರು’ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT