ಸಕಲೇಶಪುರ: ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ನಾಲ್ಕನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್. ಕಿರಣ್ಕುಮಾರ್ ಹೇಳಿದರು.

ತಾಲ್ಲೂಕಿನ ಬಾಗೆ ಗ್ರಾಮದ ಜೆಎಸ್ಎಸ್ ಪಬ್ಲಿಕ್ ಶಾಲೆಯ 20ನೇ ವಾರ್ಷಿಕೊತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ‘ಪ್ರಾಚೀನ ಭಾರತೀಯ ಪಠ್ಯಗಳು ಮತ್ತು ಸಂಪ್ರದಾಯಗಳಲ್ಲಿ ಅಮೂಲ್ಯವಾದ ಜ್ಞಾನವಿದೆ. ಅದನ್ನು ಸಂಶೋಧಿಸಿ ಆಧುನಿಕ ವಿಜ್ಞಾನಕ್ಕೆ ಜೋಡಿಸಬೇಕು. ಬಾಹ್ಯಾಕಾಶ ಸಂಬಂಧ ಯಾವುದೇ ದೇಶ ಮಾಡದ ಅನೇಕ ಸಾಧನೆಗಳನ್ನು ಇಸ್ರೋ ಮಾಡಿದೆ. 2047ಕ್ಕೆ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ಭಾರತವು ಹೊಂದಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೇರೆ ದೇಶಗಳು 50ರ ದಶಕದಲ್ಲೇ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ್ದವು; ಆಗ ಭಾರತದ ಈ ಕ್ಷೇತ್ರದ ಸಾಧನೆ ಶೂನ್ಯವಾಗಿತ್ತು. ವಿಕ್ರಂ ಸಾರಾಭಾಯಿಯಂಥ ಶ್ರೇಷ್ಠ ವಿಜ್ಞಾನಿಗಳು ಛಲಬಿಡದೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಅತಿ ದೊಡ್ಡ ಸಾಧನೆ ಮಾಡುವಂತೆ ಇಸ್ರೋವನ್ನು ಕಟ್ಟಿ ಬೆಳೆಸಿದರು. ಇಂದು ಬೇರೆ ದೇಶಗಳನ್ನೂ ಮೀರಿಸಿ ನಮ್ಮ ದೇಶ ಮಾಡಿದೆ ಸಾಧನೆ ಎಂದರು.

ಮಗ, ಮಗಳು, ಡಾಕ್ಟರ್, ಎಂಜಿನಿಯರ್ ಆಗಬೇಕು, ಕೈತುಂಬಾ ಸಂಬಳ ಪಡೆದು ಸುಂದರ ಬದುಕು ಕಟ್ಬಿಕೊಳ್ಳಬೇಕು ಎಂಬ ಬಹುತೇಕ ಪೋಷಕರ ಆಸೆ ತಪ್ಪಲ್ಲ. ಪ್ರತಿ ಮಗುವಿಗೂ ಅದರದ್ದೇ ಆದ ಪ್ರತಿಭೆ ಇದೆ. ಅವರ ಆಸಕ್ತಿ ಗಮನಿಸಿ ಆ ಕ್ಷೇತ್ರದಲ್ಲಿ ಪ್ರೋತ್ಸಾಹ ಮಾಡಬೇಕು. ಆಗ ಒಳ್ಳೆಯ ವಿಜ್ಞಾನಿ, ಕ್ರೀಡಾಪಟು, ನಟ, ಸಾಧಕ ಆಗಲು ಸಾಧ್ಯವಾಗುತ್ತದೆಎಂದರು.

ಮೈಸೂರು ಜೆಎಸ್ಎಸ್ ಮಹಾವಿದ್ಯಾಪೀಠದ ಲೆಕ್ಕಪರಿಶೋಧನೆ ನಿರ್ದೇಶಕ ಕೆ. ಆರ್. ಸಂತಾನಂ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಜೆಎಸ್ಎಸ್ ಸಂಸ್ಥೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಒತ್ತು ನೀಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು. ಸಾಧಕವಿ ದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.

ಪ್ರಾಂಶುಪಾಲ ಬಿ. ಮಧುಕುಮಾರ್ , ಉಪ ಪ್ರಾಂಶುಪಾಲ ಎಸ್. ಯೋಗೇಶ್ ಶಾಲೆಯ ಮಾಹಿತಿ ನೀಡಿದರು. ವಿದ್ಯಾರ್ಥಿಗಳಾದ ಸಾನಿಕ, ಫಾತಿಮಾ ಜೋಯಾ, ವಿದ್ಯಾರ್ಥಿ ಆರುಷ್ , ಜಿ.ಡಿ. ಲಿಖಿತ್ ಪಟೇಲ್ , ನೈಲಾ ಅಬ್ದುಲ್ ಮುನಫ್, ಸೋಹನ್ ಬಿ ಶ್ರೀಚರಣ್ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.