ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 50 ಸಾವಿರ ಪರಿಹಾರ ನೀಡಲು ಶಾಸಕ ಎಚ್‌.ಡಿ. ರೇವಣ್ಣ ಒತ್ತಾಯ

ಕಾಲುಬಾಯಿ ಜ್ವರದಿಂದ ಜಿಲ್ಲೆಯಲ್ಲಿ 2,500 ಹಸುಗಳ ಸಾವು: ರೇವಣ್ಣ
Last Updated 29 ಸೆಪ್ಟೆಂಬರ್ 2021, 15:25 IST
ಅಕ್ಷರ ಗಾತ್ರ

ಹಾಸನ: ಕಾಲುಬಾಯಿ ರೋಗದಿಂದ ಮೃತಪಟ್ಟ ಹಸುಗಳಿಗೆ ಪರಿಹಾರ ನೀಡಬೇಕು ಹಾಗೂಜಾನುವಾರುಗಳಿಗೆ ಲಸಿಕೆ ನೀಡಲು ಮುಖ್ಯಮಂತ್ರಿ ತಕ್ಷಣ ₹100 ಕೋಟಿ ಬಿಡುಗಡೆ ಮಾಡಬೇಕುಎಂದು ಶಾಸಕ ಎಚ್‌.ಡಿ. ರೇವಣ್ಣ ಆಗ್ರಹಿಸಿದರು.

ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದ ಕಾಲು ಬಾಯಿ ಲಸಿಕೆಯನ್ನೇ ರಾಸುಗಳಿಗೆ ನೀಡಿಲ್ಲ.ಇದರಿಂದ ಹಸು ಮತ್ತು ಎಮ್ಮೆಗಳಿಗೆ ಕಾಲು ಬಾಯಿ ಜ್ವರ ಹಾಗೂ ಐ.ಎಸ್‌.ಡಿ ಗಂಟು ರೋಗ ಕಾಣಿಸಿಕೊಂಡಿದೆ. ಪಶು ವೈದ್ಯರ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 2,500 ಹಸುಗಳು ಮೃತಪಟ್ಟಿದ್ದು, 10ಸಾವಿರ ರಾಸುಗಳು ಕಾಯಿಲೆಯಿಂದ ಬಳಲುತ್ತಿವೆ. ಆದರೆ, ವಾಸ್ತವದಲ್ಲಿ ಅಂದಾಜು 10 ಸಾವಿರ
ಹಸುಗಳು ಮೃತಪಟ್ಟಿದ್ದು, 40 ಸಾವಿರಕ್ಕೂ ಹೆಚ್ಚು ರಾಸುಗಳು ಕಾಯಿಲೆಯಿಂದ ಬಳಲುತ್ತಿವೆ ಎಂದುಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಹಾಸನ ಹಾಲು ಒಕ್ಕೂಟದಿಂದ ಜಿಲ್ಲೆಯಲ್ಲಿ ಪ್ರತಿ ತಿಂಗಳು ರೈತರಿಗೆ ₹100 ಕೋಟಿ ಪೇಮೆಂಟ್‌ಮಾಡಲಾಗುತ್ತಿದೆ. ಹೈನೋದ್ಯಮದಿಂದ ರೈತರು ಬದುಕು ಸಾಗಿಸುತ್ತಿದ್ದಾರೆ. ಕಾಲು ಬಾಯಿ ಜ್ವರದ ಬಗ್ಗೆಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕೂಡಲೇ ಸಭೆ ನಡೆಸುವಂತೆ ಇಲಾಖೆ ಮುಖ್ಯ ಕಾರ್ಯದರ್ಶಿಗೆಪತ್ರ ಬರೆಯಲಾಗುವುದು ಎಂದು ಹೇಳಿದರು.

ಕಾಲು ಬಾಯಿ ಜ್ವರಕ್ಕಿಂತಲ್ಲೂ ಜಿಲ್ಲೆಯಲ್ಲಿ ಐಎಸ್‌ಡಿ ಗಂಟು ರೋಗ ಕಾಣಿಸಿಕೊಂಡಿದ್ದು, ಈ ಕಾಯಿಲೆ50 ಕಿ.ಮೀ ವರೆಗೂ ಗಾಳಿಯಲ್ಲಿ ಹರಡುವ ಸಾಧ್ಯತೆ ಇದೆ. ಹಾಗಾಗಿ ಈ ರೋಗ ಕಾಣಿಸಿಕೊಂಡಹಸುಗಳನ್ನು ಪ್ರತ್ಯೇಕವಾಗಿ ಇರಿಸಬೇಕು. ನನ್ನ 8 ಹಸುಗಳಿಗೂ ಈ ರೋಗ ಕಾಣಿಸಿಕೊಂಡಿದೆ.ಒಂದೊಂದು ಹಸು ಸುಮಾರು ₹60ಸಾವಿರ ಬೆಲೆ ಬಾಳುವಂತಹವು. ರೋಗದಿಂದ ಸತ್ತಿರುವ ಪ್ರತಿ ಹಸುವಿಗೆ ಕನಿಷ್ಟ ₹50 ಸಾವಿರ ಪರಿಹಾರ ನೀಡಬೇಕು. ರಾಜ್ಯದಾದ್ಯಂತ ರಾಸುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಚ್‌.ಪಿ.ಸ್ವರೂಪ್‌, ಎಚ್‌.ಎಸ್‌.ದೇವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT