ಹಾಸನ: ಮಂಗಳೂರು ಲೋಕಾಯುಕ್ತ ಇನ್ಸ್ಪೆಕ್ಟರ್ ಜೀಪ್ ಚಾಲಕ ಲೋಕೇಶ್ ಆಚಾರ್ಯ (36) ಎಂಬುವರು
ಚನ್ನರಾಯಪಟ್ಟಣದ ವಸತಿ ಗೃಹದಲ್ಲಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳೂರು ಸಶಸ್ತ್ರ ಮೀಸಲು ಪಡೆಯ ಕಾನ್ಸ್ಟೆಬಲ್ ಆಗಿರುವ ಬಂಟ್ವಾಳದ ಲೋಕೇಶ್ ಅವರು, ಮಂಗಳವಾರ ನಂದಗೋಕುಲ ಲಾಡ್ಜ್ನಲ್ಲಿ ಕೊಠಡಿ ಬಾಡಿಗೆ ಪಡೆದಿದ್ದರು. ಮಧ್ಯಾಹ್ನ ವರೆಗೂ ಕೊಠಡಿ ಬಾಗಿಲು ತೆರೆಯದ ಕಾರಣ, ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರ ಸಮ್ಮುಖದಲ್ಲಿ ಬಾಗಿಲ ಬೀಗ ಒಡೆದಾಗ ಫ್ಯಾನ್ಗೆ ನೇಣು ಹಾಕಿಕೊಂಡಿದ್ದರು.

‘ಕಳೆದ 7–8 ತಿಂಗಳಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಸ್ಥಳದಲ್ಲಿ ಇಲಿ ಪಾಷಾಣ ಬಾಟಲಿ ದೊರೆತಿದೆ. ತನ್ನ ಬಳಿ ಇರುವ ₹38 ಸಾವಿರ ಹಣವನ್ನು ಸಹೋದರನಿಗೆ ತಲುಪಿಸುವಂತೆ ಮರಣ ಪತ್ರ ಸಹ ಬರೆದಿದ್ದಾರೆ’ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.