ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ: ಕುಮಾರಸ್ವಾಮಿ

Published 13 ಮಾರ್ಚ್ 2024, 15:45 IST
Last Updated 13 ಮಾರ್ಚ್ 2024, 15:45 IST
ಅಕ್ಷರ ಗಾತ್ರ

ಹಾಸನ: ‘ರಾಜ್ಯದ ಹಾಸನ, ಮಂಡ್ಯ, ಕೋಲಾರ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದೇವೆ. ಇನ್ನೂ 2–3 ಕ್ಷೇತ್ರ ಕೇಳಿದ್ದರೆ ಕೊಡುತ್ತಿದ್ದರು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಾ.21 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೇನೆ. ನಾನು ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ. ಒಂದೇ ಕುಟುಂಬದ ಅನೇಕರು ರಾಜಕೀಯದಲ್ಲಿದ್ದಾರೆ. ಆದರೆ ದೇವೇಗೌಡರ ಕುಟುಂಬದ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆ’ ಎಂದರು.

‘ಡಾ.ಸಿ.ಎನ್‌. ಮಂಜುನಾಥ್ ಅವರನ್ನು ಅಭ್ಯರ್ಥಿ ಮಾಡಲು ತೀರ್ಮಾನಿಸಿರಲಿಲ್ಲ. 17 ವರ್ಷ ಅವರ ಸೇವೆ ನೋಡಿ, ಅವರೇ ಅಭ್ಯರ್ಥಿಯಾಗಬೇಕು ಎಂದು ಮಾಧ್ಯಮದವರೇ ಶುರು ಮಾಡಿದರು. ಬಿಜೆಪಿ ಹೈಕಮಾಂಡ್ ಕೂಡ ನಿಮ್ಮ ಭಾವನವರನ್ನು ಒಪ್ಪಿಸಬೇಕು ಎಂದು ಮನವಿ ಮಾಡಿತು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮಂಜುನಾಥ್ ಸ್ಪರ್ಧಿಸುತ್ತಾರೆ’ ಎಂದರು.

‘ಕನಕಪುರದಿಂದ ಹಾಸನಕ್ಕೆ ಬಂದು ಜೆಡಿಎಸ್ ಸೋಲಿಸುತ್ತೇವೆ ಎನ್ನುತ್ತಾರೆ. ಹಾಸನದಲ್ಲಿ ಕೂಗಿದರೆ, ಹೊಳೆನರಸೀಪುರಕ್ಕೆ ಕೇಳಬೇಕು ಎಂದೂ ಹೇಳುತ್ತಾರೆ. ರಾಜಕೀಯದಲ್ಲಿ ಸೋಲು, ಗೆಲುವು ಸಹಜ. ಈಗ ಇಲ್ಲಿನ ಕೂಗು ಕನಕಪುರದವರೆಗೂ ಕೇಳಬೇಕು’ ಎನ್ನುವ ಮೂಲಕ, ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್‌ ಸಹೋದರರನ್ನು ಅವರು ಪರೋಕ್ಷವಾಗಿ ಕುಟುಕಿದರು.

‘ಸಂಸದ ಪ್ರಜ್ವಲ್ ರೇವಣ್ಣ ಅವರೇ ಹಾಸನ ಅಭ್ಯರ್ಥಿ. ಮಂಡ್ಯದಲ್ಲಿ ನನ್ನ ಮಗನಿಗೆ ಆದಂತೆ, ಹಾಸನದಲ್ಲಿ ನನ್ನ ಸಹೋದರನ ಮಗನಿಗೆ ಆಗಬಾರದು. ಪ್ರಜ್ವಲ್ ರೇವಣ್ಣನ ಮಗ ಅಲ್ಲ, ನನ್ನ ಮಗ. ದಯವಿಟ್ಟು ಅವನನ್ನು ಉಳಿಸಿಕೊಳ್ಳಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT