ಶ್ರವಣಬೆಳಗೊಳ: ಜಲ ಜೀವನ್ ಮಿಷನ್ ಯೋಜನೆಯಡಿ ನಳಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಅನುಷ್ಠಾನದ ಹೊಣೆ ಹೊತ್ತಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರು, ಫಲಾನುಭವಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಶ್ರವಣಬೆಳಗೊಳ ವ್ಯಾಪ್ತಿಯಲ್ಲಿ 7 ಗ್ರಾಮ ಪಂಚಾಯಿತಿಗಳ 71 ಹಳ್ಳಿಗಳನ್ನು ಒಳಗೊಂಡಿದೆ. ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾಮಗಾರಿಯ ಮೇಲ್ವಿಚಾರಣೆ ನಡೆಸದೇ, ಹಿನ್ನಡೆಯಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒಗಳು ಮತ್ತು ಸಾರ್ವಜನಿಕರು ಹೇಳುತ್ತಿದ್ದಾರೆ.

ದಮ್ಮನಿಂಗಲ ಪಂಚಾಯಿತಿ ವ್ಯಾಪ್ತಿಯಲ್ಲಿ 12 ಗ್ರಾಮಗಳಿದ್ದು, 6 ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. 3 ಗ್ರಾಮಗಳಲ್ಲಿ ಪೂರ್ಣ ಕಾಮಗಾರಿಯಾಗಿದೆ. ಅರುವನಹಳ್ಳಿ, ಎರೆಕೊಪ್ಪಲು, ಡಿ.ಸಾತೇನಹಳ್ಳಿ ಗ್ರಾಮಗಳಲ್ಲಿ ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ.

ಸುಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಗ್ರಾಮಗಳಿದ್ದು, 3 ಗ್ರಾಮಗಳಲ್ಲಿ ಟ್ಯಾಂಕ್ ನಿರ್ಮಾಣದ ಕಾಮಗಾರಿ, ಪೈಪ್ ಲೈನ್ ಮತ್ತು ವಿತರಣಾ ಕೆಲಸ ಅಪೂರ್ಣವಾಗಿದೆ. 1 ಗ್ರಾಮದಲ್ಲಿ ಕೆಲಸ ಪೂರ್ಣಗೊಂಡಿದೆ. ಪರಮ, ಹೊಸಹಳ್ಳಿ, ಕೋರೇನಹಳ್ಳಿ ಕಾಮಗಾರಿ ಗ್ರಾಮಗಳಲ್ಲಿ ಪ್ರಾರಂಭವಾಗಿಲ್ಲ. ಇನ್ನುಳಿದ ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಪಿಡಿಒ ರಾಘವೇಂದ್ರ ಹೇಳಿದರು.

‘ಕುಂಭೇನಹಳ್ಳಿಯಲ್ಲಿ ಓವರ್ ಹೆಡ್ ಟ್ಯಾಂಕ್, ಪೈಪ್ಲೈನ್ ಅಪೂರ್ಣವಾಗಿದ್ದರೂ, ನಲ್ಲಿ ಮತ್ತು ಮೀಟರ್ ಹಾಕಲಾಗಿದೆ. ಸೇವೆ ಒದಗಿಸುವವರೆಗೆ ಹಾಕಿರುವ ಇವು ಉಳಿಯುತ್ತವೆಯೇ’ ಎಂದು ಗೃಹಿಣಿ ರೂಪಾಕುಮಾರ್ ಪ್ರಶ್ನಿಸುತ್ತಾರೆ.

ಕಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ 6 ಗ್ರಾಮಗಳ ಪೈಕಿ, ಕಬ್ಬಾಳು ಗ್ರಾಮದಲ್ಲಿ ವಿತರಣಾ ಟ್ಯಾಂಕ್ ಪೈಪ್ಲೈನ್ ಕೆಲಸ ಆಗದೇ ಮನೆಗಳ ಮುಂದೆ ನಲ್ಲಿ, ಮೀಟರ್ ಅಳವಡಿಸುವ ಕೆಲಸ ಆಗಿದೆ. ಸುಗ್ಗನಹಳ್ಳಿ ಕೊಪ್ಪಲಿನಲ್ಲಿ ಟ್ಯಾಂಕ್ ಆಗದೇ ನಲ್ಲಿ, ಮೀಟರ್ ಅಳವಡಿಸಲಾಗಿದೆ.

‘ಕೆ.ಹೊಸಹಳ್ಳಿ ಮತ್ತು ಸಿದ್ಧರಾಮಯ್ಯ ನಗರದಲ್ಲಿ ಟ್ಯಾಂಕ್ ಆಗಿದ್ದು, ನಲ್ಲಿ, ಮೀಟರ್ ಅಳವಡಿಸಲಾಗಿದೆ. ಡಿಂಕ, ಡಿಂಕದ ಕೊಪ್ಪಲು ಗ್ರಾಮದಲ್ಲಿ ವಿತರಣಾ ಟ್ಯಾಂಕ್ ಆಗದೇ ಪೈಪ್ಲೈನ್, ನಲ್ಲಿ, ಮೀಟರ್ ಅಳವಡಿಸುವ ಕೆಲಸ ಆಗಿದೆ’ ಎಂದು ನೀರುಗಂಟಿ ವಿಜಯಕುಮಾರ್ ಹೇಳಿದರು.

‘ಜುಟ್ಟನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ 18 ಹಳ್ಳಿಗಳ ಪೈಕಿ, 12 ಗ್ರಾಮಗಳಲ್ಲಿ ಕಾಮಗಾರಿ ಅಪೂರ್ಣವಾಗಿದೆ. ಕಾಮಗಾರಿ ಪೂರ್ಣವಾಗಿರುವ ಎಂ.ಹೊಸೂರು, ಜುಟ್ಟನಕೊಪ್ಪಲು, ಗ್ರಾಮಗಳಲ್ಲಿ ನೀರು ಒದಗಿಸುವ ಪ್ರಾಯೋಗಿಕ ಪರೀಕ್ಷಾರ್ಥ ನಡೆದಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್ ಗೌಡ ಹೇಳಿದರು.

‘ಬೆಕ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಹಳ್ಳಿಗಳಲ್ಲಿ, 9 ಗ್ರಾಮಗಳಲ್ಲಿ ಶೇ 90ರಷ್ಟು ಕಾಮಗಾರಿ ಪೂರ್ಣವಾಗಿದೆ. ರಾಚೇನಹಳ್ಳಿಯಲ್ಲಿ ಜಾಗದ ಸಮಸ್ಯೆಯಿಂದ ವಿತರಣಾ ಟ್ಯಾಂಕ್ಗೆ ಅಡಚಣೆಯಾಗಿದೆ. ಶಿವಪುರ ಮತ್ತು ಹೊಮನ್ನೇನಹಳ್ಳಿಯಲ್ಲಿ ಕಾಮಗಾರಿ ಮುಗಿದಿದ್ದು, ಪರೀಕ್ಷಾರ್ಥ ನೀರು ಸರಬರಾಜು ಆಗುತ್ತಿದೆ’ ಎಂದು ಪಿಡಿಒ ಮೇಘಶ್ರೀ ಹೇಳಿದರು.

‘ಕಾಂತರಾಜಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 12 ಗ್ರಾಮಗಳ ಪೈಕಿ 7 ಗ್ರಾಮಗಳಲ್ಲಿ ಶೇ 80 ರಷ್ಟು ಕಾಮಗಾರಿಯಾಗಿದೆ. ಬರಾಳು, ಸುಗ್ಗನಹಳ್ಳಿ, ಅಜ್ಜೇನಹಳ್ಳಿ, ಹಾಲುಮತಿಘಟ್ಟ, ಗೊಮ್ಮಟನಗರಗಳಲ್ಲಿ ಕಾಮಗಾರಿಯಾಗಿದ್ದು, ಪರೀಕ್ಷಾರ್ಥ ನೀರು ಸರಬರಾಜು ಆಗುತ್ತಿದೆ’ ಎಂದು ಪಿಡಿಒ ಸುಮನ್ ಕೆ.ಆರ್. ಹೇಳುತ್ತಾರೆ.

ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ಪಟ್ಟಣವೂ ಸೇರಿದಂತೆ 5 ಗ್ರಾಮಗಳು ಬರುತ್ತವೆ. 7 ವಾರ್ಡ್ಗಳಿಂದ 17 ಸದಸ್ಯರನ್ನು ಹೊಂದಿದೆ. ಎಲ್ಲ ವಾರ್ಡ್ಗಳಲ್ಲಿ ವಿತರಣಾ ಪೈಪ್ಲೈನ್, ಅಳವಡಿಸಿದ್ದು, ಬಿಟ್ಟರೆ ಬೇರೇನೂ ಕೆಲಸವಾಗಿಲ್ಲ. ನಲ್ಲಿ ಅಳವಡಿಸಲು ಚೆನ್ನಾಗಿದ್ದ ರಸ್ತೆಯನ್ನು ಅಗೆದು ವರ್ಷವಾದರೂ ಕೆಲಸ ಪೂರ್ಣಗೊಳಿಸಿಲ್ಲ ಎಂಬುದು ಸ್ಥಳೀಯರ ಆರೋಪ.

ಅಧಿಕಾರಿಗಳ ಸಭೆ

ಶುದ್ಧ ಕುಡಿಯುವ ನೀರಿನ ಶಾಶ್ವತ ಯೋಜನೆಯಾಗಿದ್ದು ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಅನೇಕ ಸಾಧಕ–ಬಾಧಕಗಳನ್ನು ಪರಿಹರಿಸಿಕೊಂಡು ಸಾಗಬೇಕಾಗಿದೆ. ನಿಧಾನಗತಿಯ ಕಾಮಗಾರಿಯ ಬಗ್ಗೆ ಗಮನ ಹರಿಸಲಾಗಿದ್ದು ಚುರುಕು ಮುಟ್ಟಿಸುವುದಕ್ಕೆ ಅಧಿಕಾರಿಗಳ ಸಭೆಯನ್ನು ನಡೆಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು. ಜೆಜೆಎಂ ಬಹು ಗ್ರಾಮ ಯೋಜನೆಗಳ ಕಾಮಗಾರಿಗಳು ಜೊತೆಯಾಗಿ ಭರದಿಂದ ಸಾಗಿವೆ. ಗುತ್ತಿಗೆದಾರರು ಮತ್ತು ಕಾರ್ಮಿಕರು ಪ್ರತ್ಯೇಕವಾಗಿ ಕೆಲಸ ನಿರ್ವಹಿಸುತ್ತಿದ್ದು ಸಮನ್ವಯದ ಕೊರತೆಯಿಂದಾಗಿ ತಾತ್ಕಾಲಿಕ ಹಿನ್ನಡೆ ಆಗಿದೆ. ಈ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾಮಗಾರಿ ಮೇಲ್ವಿಚಾರಕರಾದ ಜಿಲ್ಲಾ ಪಂಚಾಯಿತಿ ಸಹಾಯಕ ಎಂಜಿನಿಯರ್ ವೆಂಕಟೇಶ್ ತಿಳಿಸಿದರು.

ಮನೆ ಮನೆಗೆ ಶುದ್ಧ ನೀರು

ನದಿ ಅಣೆಕಟ್ಟು ಕೆರೆಕಟ್ಟೆ ಹಳ್ಳ ಕೊಳವೆ ಮತ್ತು ತೆರೆದ ಬಾವಿಗಳ ನೀರನ್ನು ಶುದ್ಧೀಕರಿಸಿ ನೂತನವಾಗಿ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕ್ಗಳಿಗೆ ಸಂಗ್ರಹಿಸಲಾಗುತ್ತದೆ. ಮುಖ್ಯ ಪೈಪ್ಲೈನ್ ಮೂಲಕ ಗುಣಮಟ್ಟ ಮತ್ತು ಸುರಕ್ಷತೆಯ ಪರಿಕ್ಷಾರ್ಥ ಶುದ್ಧ ನೀರು ನಲ್ಲಿಗಳ ಮೂಲಕ ಸರಬರಾಜು ಆಗಲಿದೆ ಎಂದು ನೀರುಗಂಟಿಗಳಾದ ಕೆ.ಎನ್.ನವೀನ್ ಚಂದ್ರಶೇಖರ್ ಚಿಕ್ಕೇಗೌಡ ವಿಜಯಕುಮಾರ ನಾಗರಾಜು ಅಶೋಕ ಹೇಳುತ್ತಾರೆ. ಮನೆಗಳ ಮುಂಭಾಗದಲ್ಲಿ ನಲ್ಲಿ ಅಳವಡಿಸಿದ್ದು ಅದರ ಪಕ್ಕದಲ್ಲಿಯೇ ಮೀಟರ್ ಸಹ ಇರುತ್ತದೆ. ಬಳಕೆಯ ನೀರಿನ ಪ್ರಮಾಣವೂ ಗೊತ್ತಾಗುತ್ತದೆ. ಕುಟುಂಬದ ಪ್ರತಿಯೊಬ್ಬರಿಗೂ ದಿನಕ್ಕೆ 55 ಲೀಟರ್ನಂತೆ ಶುದ್ಧ ನೀರು ಕೊಡಬೇಕು. ದುರ್ಬಳಕೆಗೆ ಆಸ್ಪದವಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.