ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕ ಶ್ರೀಮಂತ ಆಗಲು ಸಾಧ್ಯ: ಶಾಸಕ ಸಿಮೆಂಟ್ ಮಂಜು 

Published 1 ನವೆಂಬರ್ 2023, 13:20 IST
Last Updated 1 ನವೆಂಬರ್ 2023, 13:20 IST
ಅಕ್ಷರ ಗಾತ್ರ

ಆಲೂರು: ಉತ್ತಮ ಕೃಷಿಕ ಈ ನಾಡಿನಲ್ಲಿ ಶ್ರೀಮಂತ ಎನ್ನುವಂಥ ಕಾಲ ಹತ್ತಿರ ಬರಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ತಾಲ್ಲೂಕು ಆಡಳಿತ ಪಟ್ಟಣದಲ್ಲಿ  ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕನ್ನಡ ನಾಡಿನ ಮಣ್ಣಿನ ಪವಿತ್ರತೆ ಬೇರೆಲ್ಲೂ ಇಲ್ಲ. ನಾವು ಯಾವ ಭಾಷೆ ಕಲಿತರೂ ಮಾತೃಭಾಷೆ ಕನ್ನಡವನ್ನು ಎಂದಿಗೂ ಮರೆಯಬಾರದು ಎಂದರು. ತಾಲ್ಲೂಕಿನಲ್ಲಿ ಕಾಲೇಜುಗಳು, ಕೈಗಾರಿಕೆಗಳು, ಆಸ್ಪತ್ರೆ ಉನ್ನತೀಕರಣ, ವಾಹನ ದಟ್ಟಣೆ ನಿವಾರಣೆ, ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳಾವಕಾಶ, ರಿಕ್ಷಾ ನಿಲ್ದಾಣ, ಸಂತೆ ಸ್ಥಳಾಂತರ, ಯುವಜನರಿಗೆ ಉದ್ಯೋಗವಕಾಶಕ್ಕೆ  ಶ್ರಮಿಸುತ್ತೇನೆ ಎಂದರು.

ತಹಶೀಲ್ದಾರ್ ನಂದಕುಮಾರ್  ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕ್ರೀಡಾಪಟು ಪ್ರೀತಮ್, ಸಮಾಜ ಸೇವಕ ಅಜ್ಜೇನಹಳ್ಳಿ ರಂಗಯ್ಯ, ವಿದ್ಯಾರ್ಥಿನಿಯರಾದ ಗಾನವಿ, ವೇದಶ್ರೀ, ಡಾ. ಜಯರಾಜ್, ಕಾರ್ಮಿಕ ಸಂಘದ ಅಧ್ಯಕ್ಷರಾದ ಆನಂದ, ಸಾಹಿತಿ ಎಚ್. ಡಿ. ಚಿಂತನ್  ಅವರನ್ನು ಸನ್ಮಾನಿಸಲಾಯಿತು.

  ಶಿಕ್ಷಕಿ ವೇದಾವತಿ, ದಾಕ್ಷಾಯಿಣಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.  ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ. ಜೆ. ಕೃಷ್ಣೇಗೌಡ, ಪೊಲೀಸ್ ಇನ್‌ಸ್ಪೆಕ್ಟರ್‌ ಗಂಗಾಧರ್, ಪಿಎಸ್‌ಐ ಜನಾಬಾಯಿ ಕಡಪಟ್ಟಿ, ಕನ್ನಡ, ಜನಸ್ಪಂದನ ಸಂಘಟನೆಗಳ ಪದಾಧಿಕಾರಿಗಳು, ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ, ನಾಗರೀಕ ಹೋರಾಟ ಸಮಿತಿ ಅಧ್ಯಕ್ಷ ಕೆ. ಎಸ್. ಮಂಜೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT