ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಣನೂರು: ಮಧ್ಯರಾತ್ರಿವರೆಗೂ ಒತ್ತುವರಿ ತೆರವು ಕಾರ್ಯಾಚರಣೆ

Published 3 ಸೆಪ್ಟೆಂಬರ್ 2024, 14:28 IST
Last Updated 3 ಸೆಪ್ಟೆಂಬರ್ 2024, 14:28 IST
ಅಕ್ಷರ ಗಾತ್ರ

ಕೊಣನೂರು: ಇಲ್ಲಿನ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ನಿರ್ಮಿಸಿಕೊಂಡಿದ್ದ ಶೆಡ್‌ಗಳನ್ನು ವ್ಯಾಪಾರಿಗಳ ವಿರೋಧದ ನಡುವೆಯೂ ಶಾಸಕರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿದರು.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಶಾಸಕರು ತೆರವುಗೊಳಿಸಿದರು.
ಪಟ್ಟಣದ ಹಾಸನ-ಮಡಿಕೇರಿ ಮುಖ್ಯ ರಸ್ತೆಯಲ್ಲಿ ವ್ಯಾಪಾರಿಯೊಬ್ಬರು ಗ್ರಾಮಠಾಣಾ ಜಾಗವನ್ನು ಒತ್ತುವರಿ ಮಾಡಿ ಶೆಡ್ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸಲು ಮುಂದಾದಾಗ ಸಮಯಾವಕಾಶ ಕೇಳಿದ ಸಂದರ್ಭ ಕೆಲಕಾಲ ಸ್ಥಳದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಯಿತು. ಶಾಸಕ ಎ.ಮಂಜು ಸ್ಥಳಕ್ಕೆ ಭೇಟಿ ನೀಡಿ ಕೋರ್ಟ್‌ ಆದೇಶ ಪಾಲಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಎ.ಮಂಜು ಮಾತನಾಡಿ, ‘ಸಾರ್ವಜನಿಕರು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಳ್ಳಬಾರದು, ಒತ್ತುವರಿ ಜಾಗವನ್ನು ತೆರವುಗೊಳಿಸಲು ಅಡ್ಡಿಪಡಿಸುವುದೂ ಕಾನೂನಿನ ಪ್ರಕಾರ ತಪ್ಪು. ಒತ್ತುವರಿ ತೆರವುಗೊಳಿಸಲು ಗ್ರಾಮ ಪಂಚಾಯಿತಿಯವರೊಂದಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಿಸ್ಬಾ ರಿಜ್ವಾನ್ ಮಾತನಾಡಿ, ‘ಮಾಗಡಿ-ಸೋಮವಾರಪೇಟೆ ಮುಖ್ಯ ರಸ್ತೆಯ ಬದಿಯಲ್ಲಿ, ಕೊಳಲು ಗೋಪಾಲಕೃಷ್ಣ ದೇವಾಲಯದ ಮುಂಭಾಗ ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಹಾಗೂ ಅಪಘಾತಗಳನ್ನು ತಪ್ಪಿಸಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲು ಎಲ್ಲಾ ವರ್ತಕರಿಗೆ ಈಗಾಗಲೇ ಅಧಿಕಾರಿಗಳು ಸೂಚನೆ ನೀಡಲಾಗಿದೆ. ಒಂದು ವೇಳೆ ತೆರವುಗೊಳಿಸದಿದ್ದಲ್ಲಿ ಪೊಲೀಸ್ ಸಿಬ್ಬಂದಿ ರಕ್ಷಣೆ ಪಡೆದು ಪಂಚಾಯತಿ ವತಿಯಿಂದಲೇ ತೆರವುಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ರಸ್ತೆಯ ಮೇಲೆ ಹಾಗೂ ಅಕ್ಕಪಕ್ಕ ಅಂಗಡಿ ಹಾಕಿಕೊಳ್ಳುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಶಾಸಕ ಎ.ಮಂಜು ಸೋಮವಾರ ಸಂಜೆ 4ರಿಂದ ರಾತ್ರಿ 12 ಗಂಟೆವರೆಗೂ ಒತ್ತುವರಿ ತೆರವು ಸ್ಥಳದಲ್ಲೇ ಇದ್ದರು.

‘ಶಾಸಕರು ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸಿದ್ದು ಸರಿಯಲ್ಲ. ಪಂಚಾಯತಿ ಸಿಬ್ಬಂದಿ ಬಂದಾಗಲೇ ತೆರವೊಗೊಳಿಸಿದ್ದರೆ ಎಲ್ಲವೂ ಶಾಂತ ರೀತಿಯಲ್ಲೆ ನಡೆಯುತ್ತಿತ್ತು ಎಂದು ವ್ಯಾಪಾರಿಗಳು ಮಾತನಾಡಿಕೊಂಡರು.

ಗ್ರಾಸ ಪಂಚಾಯಿತಿ ಸದಸ್ಯರಾದ ಶಿವಣ್ಣ, ವೆಂಕಟೇಶ್, ಜಾಕೀರ್, ಮುಖಂಡ ಡಿಶ್ ಸೋಮಶೇಖರ್, ರಿಜ್ವಾನ್, ಪರ್ವೇಜ್, ಶಫಿ, ನಾಸಿರ್, ತನ್ವೀರ್, ಇರ್ಷಾದ್,  ಶಾಬಾಜ್, ಕೃಷ್ಣ, ಮೋಹನ್, ಸಲ್ಮಾನ್, ಪ್ರಸನ್ನ, ಅಪ್ಪಣ್ಣ, ರವಿಕುಮಾರ್, ರಘು, ಸುನಿಲ್, ಇರ್ಫಾನ್, ಶಂಕರ್, ಮಂಜುನಾಥ್ ಮುಂತಾದವರಿದ್ದರು.

ಕೊಣನೂರಿನಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವು ಸಂಬಂಧ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಶಾಸಕ ಎ.ಮಂಜು ಚರ್ಚಿಸಿದರು
ಕೊಣನೂರಿನಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವು ಸಂಬಂಧ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಶಾಸಕ ಎ.ಮಂಜು ಚರ್ಚಿಸಿದರು
ಕೊಣನೂರಿನಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು
ಕೊಣನೂರಿನಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT