ಕೊಣನೂರು: ರಾಮನಾಥಪುರ ಹೋಬಳಿಯ ವಡ್ಡರಹಳ್ಳಿಯಲ್ಲಿ ಜಮೀನು ವಿವಾದಕ್ಕೆ ಗುಂಪೊಂದು 5 ಜನರ ಮೇಲೆ ಹಲ್ಲೆ ನಡೆಸಿದೆ.

ಶನಿವಾರ ಜಮೀನು ವಿವಾದದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದೆ. ನಿಂಗರಾಜಮ್ಮ ಎಂಬುವರ ಹೆಸರಿನಲ್ಲಿದ್ದ 3.19 ಗುಂಟೆ ಜಮೀನನ್ನು ಅವರ ಅಣ್ಣ ಹಾಲಪ್ಪನವರ ಮಕ್ಕಳಾದ ರಾಜಪ್ಪ, ರತನ್ ಎಂಬುವರು ನಿಂಗರಾಜಮ್ಮ ಬದುಕಿದ್ದಾಗಲೇ ಮರಣ ಪ್ರಮಾಣ ಪತ್ರ ಪಡೆದು ಖಾತೆ ಮಾಡಿಸಿಕೊಂಡಿದ್ದು, ವಿಠಲ ಎಂಬುವವರು ಲೋಕಾಯುಕ್ತ ಪೊಲೀಸ್ ಘಟಕಕ್ಕೆ ದೂರು ನೀಡಿದ್ದಾರೆ.

ಈ ಬಗ್ಗೆ ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರ ಜನಸ್ಪಂದನ ಕಾರ್ಯಕ್ರಮದಲ್ಲಿ ದೂರು ನೀಡಲು ನಿಂಗರಾಜಮ್ಮ, ತಮ್ಮ ಮಕ್ಕಳೊಂದಿಗೆ ಹೊರಟಿದ್ದ ಸಂದರ್ಭ ಹಾಲಪ್ಪನವರ ಮಕ್ಕಳ ಗುಂಪಿನೊಂದಿಗೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ವಿಠಲ ಕಾರಿನ ಗಾಜು ಒಡೆದು ಹಾಕಲಾಗಿದೆ. ಅವರ ಕೈಗೆ ಗಾಯವಾಗಿದ್ದು, ಕೊಣನೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಾಸನ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

ಹಲ್ಲೆ ನಡೆಸಿರುವ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.