ಹಾಸನ: ‘ಬೇಲೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ವಿಜಯನಗರ ಬಡಾವಣೆಯ ಮಹಿಳೆ ಲೀಲಮ್ಮ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆಕೆಗೆ ಮಾನಸಿಕ ಸ್ಥಿಮಿತ ಇಲ್ಲ ಎನ್ನುವ ಮಾಹಿತಿ ಇದೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುತ್ತಿದೆ’ ಎಂದು ಎಸ್ಪಿ ಮೊಹಮ್ಮದ್ ಸುಜೀತಾ ತಿಳಿಸಿದ್ದಾರೆ.

‘ಶನಿವಾರ ರಾತ್ರಿ 8.30ಕ್ಕೆ ಲೀಲಮ್ಮ ಹಾಸನದಿಂದ ಹೊರಟು ಬೇಲೂರು ಬಸ್ ಹತ್ತಿದ್ದಾರೆ. ನಂತರ ಚಿಕ್ಕಮಗಳೂರಿಗೆ ಹೋಗಿ ವಾಪಸ್ ಬೇಲೂರಿಗೆ ಬಂದಿದ್ದಾರೆ. ಬೇಲೂರಿನಲ್ಲಿ ಇಳಿದು ಪುರಸಭೆ ಆವರಣಕ್ಕೆ ಬಂದಿದ್ದು, ಮಹಿಳೆಯ ಸಂಪೂರ್ಣ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೇಗುಲಕ್ಕೆ ಹೋಗಿ ಬಂದ ಬಳಿಕ ಮರಳಿ ಹಾಸನಕ್ಕೆ ಬಂದಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಹಾಸನದ ವಿಜಯನಗರದ ಆಕೆಯ ಮನೆ ಬಳಿಯೇ ಮಹಿಳೆಯನ್ನು ವಶಕ್ಕೆ ಪಡೆದಿದ್ದು, ಆಕೆಗೆ ವೈದ್ಯಕೀಯ ಪರೀಕ್ಷೆ ಅಗತ್ಯ ಇದೆ. ಈ ಹಿಂದೆ ಮನೆಯಲ್ಲೂ ಇದೇ ರೀತಿ ವರ್ತಿಸಿದ್ದ ಬಗ್ಗೆ ಕುಟುಂಬ ಸದಸ್ಯರಿಂದ ಮಾಹಿತಿ ಇದೆ’ ಎಂದು ತಿಳಿಸಿದರು.
.ಬೇಲೂರು | ಗಣೇಶ ಮೂರ್ತಿಯ ಮೇಲೆ ಚಪ್ಪಲಿ: ಸ್ಥಳೀಯರಿಂದ ಪ್ರತಿಭಟನೆ; ಬಂದ್ ಎಚ್ಚರಿಕೆ.ಗಣಪತಿ ವಿಗ್ರಹದ ಮೇಲೆ ಚಪ್ಪಲಿ: ಬುಲ್ಡೋಜರ್ ಹತ್ತಿಸಬೇಕು; ಸಿ.ಟಿ.ರವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.