ಹಳೇಬೀಡು: ಅಡಗೂರು, ಗಂಗೂರು ಹಾಗೂ ಲಿಂಗಪ್ಪನಕೊಪ್ಪಲು ಸುತ್ತಮುತ್ತ ಶುಕ್ರವಾರ ಸಂಜೆ
5.20ರಲ್ಲಿ ಜನರಿಗೆ ಲಘು ಭೂಕಂಪ ಸಂಭವಿಸಿದ ಅನುಭವ ಆಗಿದೆ.

ದ್ಯಾವಪ್ಪನಹಳ್ಳಿ, ಚಟಚಟ್ಟಿಹಳ್ಳಿ, ಕೆಂಪಗೊಡನಹಳ್ಳಿ, ತಿರುಮಲನಹಳ್ಳಿ ಮೊದಲಾದ ಗ್ರಾಮದ ಜನರು ಭಯದಿಂದ ಮನೆ ಹೊರಗೆ ಬಂದರು.ಗ್ರಾಮಗಳಿಗೆ ಸಬ್ ಇನ್ಸ್ಪೆಕ್ಟರ್ ಗಿರಿಧರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಜೋರು ಶಬ್ದದೊಂದಿಗೆ ಭೂಮಿ ನಡುಗಿದಂತಾಯಿತು. ಮನೆಗಳಲ್ಲಿ ಪಾತ್ರೆಗಳು ಅಲುಗಾಡಿವೆ’ ಎಂದು ಲಿಂಗಪ್ಪನಕೊಪ್ಪಲು ಗ್ರಾಮದ ಎಲ್.ಈ.ಶಿವಪ್ಪ ತಿಳಿಸಿದರು.

‘ಹಳೇಬೀಡು ಹೋಬಳಿಯ ಹಲವು ಗ್ರಾಮದಿಂದ ಲಘು ಭೂಕಂಪದ ಅನುಭವ ಆಗಿರುವ ಮಾಹಿತಿ ಬಂದಿದೆ. ಈ ಕುರಿತು ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ಕಂಪನ ಮಾಪನದಮಾಹಿತಿ ಕೇಳಲಾಗಿದೆ’ ಎಂದು ತಹಶೀಲ್ದಾರ್ ಮೋಹನ್ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.