ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅರಸೀಕೆರೆ | ಹೃದಯ ವೈಶಾಲ್ಯದಿಂದ ಬಾಳಿ: ಶಿವಕುಮಾರ್ ಶಿವಾಚಾರ್ಯ ಸ್ವಾಮೀಜಿ

Published 19 ನವೆಂಬರ್ 2023, 14:24 IST
Last Updated 19 ನವೆಂಬರ್ 2023, 14:24 IST
ಅಕ್ಷರ ಗಾತ್ರ

ಅರಸೀಕೆರೆ: ‘ಮನುಷ್ಯ ತನ್ನ ನೆರೆಹೊರೆಯರ ಜೊತೆ ಪ್ರೀತಿ, ಸಮಾಧಾನ ಮತ್ತು ಹೃದಯ ವೈಶಾಲ್ಯದಿಂದ ಕೂಡಿ ಬಾಳಿದರೆ ಸುಸಂಸ್ಕೃತ, ಸಜ್ಜನ ವ್ಯಕ್ತಿ ಆಗುತ್ತಾನೆ’ ಎಂದು ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಬೃಹನ್ಮಠದ ತರಳಬಾಳು ಶಿವಕುಮಾರ್ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕಸಬಾ ಹೋಬಳಿಯ ನಾಗತಿಹಳ್ಳಿ ಗ್ರಾಮ ದೇವತೆ ಕರಿಯಮ್ಮ ದೇವಿಯ ನೂತನ ದೇವಾಲಯ ಪ್ರಾರಂಭೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ ಎಂಬ ವಚನದ ಸಾರವನ್ನು ತಿಳಿಹೇಳಿದ ಅವರು, ‘ಪ್ರಸ್ತುತ ರಾಜಕಾರಣಿಗಳು ತಮ್ಮ ಮನಬಂದಂತೆ ಹೊರಜಗತ್ತಿನಲ್ಲಿ ಕೆಸರು ಎರಚುವುದು ಬಿಟ್ಟು, ವಿಧಾನಸಭೆಯಲ್ಲಿ ತಪ್ಪು– ಒಪ್ಪುಗಳ ವಿಮರ್ಶೆ ಮಾಡಿ ನ್ಯಾಯ ರೀತಿಯಿಂದ ಜನ ಸೇವೆ ಮಾಡಲಿ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಧು ವೀರಶೈವ ಸಮಾಜದ ಅಧ್ಯಕ್ಷ ಹಿರಿಯೂರು ರೇವಣ್ಣ, ‘ಸಿರಿಗೆರೆ ಶ್ರೀಗಳು ಬರುವವರೆಗೊ ದೇವಸ್ಥಾನದ ಪ್ರಾರಂಭೋತ್ಸವ ಮಾಡುವುದಿಲ್ಲ ಎಂದು ಹಟ ಹಿಡಿದಿದ್ದ ಭಕ್ತರು, ಶ್ರೀಗಳು ಬರುವಿಕೆ ಸಂತಸಗೊಂಡಿದ್ದಾರೆ’ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ದಿಬ್ಬದಳ್ಳಿ ಶಾಮಸುಂದರ್, ಶರಣ ಸಾಹಿತ್ಯ ಮತ್ತು ಪದ್ಧತಿ, ಸಂಸ್ಕೃತಿ ಬಗ್ಗೆ ತಿಳಿಸಿದರು. ಭಕ್ತಾದಿಗಳಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ಶಾಸಕ ಕೆ.ಎಂ. ಶಿವಲಿಂಗೇಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT