ಸಕಲೇಶಪುರ (ಹಾಸನ): ದಶಕಗಳ ಕಾಲ ಸಂಪರ್ಕವೇ ಇಲ್ಲದೆ ಜೀವನ ನಡೆಸಿದ, 90 ವರ್ಷ ದಾಟಿದ ಗೆಳತಿಯರಿಬ್ಬರು ಶುಕ್ರವಾರ ಪರಸ್ಪರ ಭೇಟಿಯಾದರು. ಇದಕ್ಕೆ ಕಾರಣವಾಗಿದ್ದು ಲೋಕಸಭಾ ಚುನಾವಣೆ ಎಂಬುದೇ ವಿಶೇಷ.

ತಾಲ್ಲೂಕಿನ ಗುಲಗಳಲೆ ಗ್ರಾಮದಲ್ಲಿ ಮತದಾನ ಮಾಡಲು ಬಂದ ಜಾನಮ್ಮ (94) ಹಾಗೂ ಫಾತಿಮಾ (93) ಮುಖಾಮುಖಿಯಾದರು. ಕ್ಷಣದಲ್ಲಿಯೇ ಗೆಳತಿಯರು ಪರಸ್ಪರ ಗುರುತು ಹಿಡಿದು, ಅಪ್ಪಿಕೊಂಡರು. ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.

ಇಬ್ಬರಿಗೂ ಈಗ 90 ವರ್ಷ ದಾಟಿದೆ. ಮದುವೆಯಾದ ನಂತರ ಸಂಪರ್ಕ ತಪ್ಪಿತ್ತು. ಇಬ್ಬರೂ ಹತ್ತಾರು ವರ್ಷಗಳಿಂದ ಒಬ್ಬರನ್ನೊಬ್ಬರು ನೋಡಿರಲೂ ಇಲ್ಲ. ಅದೆಷ್ಟೋ ವರ್ಷಗಳ ನಂತರ ಮತಗಟ್ಟೆಯಲ್ಲಿ ಎದುರಾದರು. ವಯಸ್ಸು ಮರೆತರು, ಬಾಲ್ಯದ ನೆನಪುಗಳ ಬುತ್ತಿ ಬಿಚ್ಚಿ ಭಾವನಾತ್ಮಕವಾಗಿ ಪರಸ್ಪರ ಅಪ್ಪಿಕೊಂಡರು. ಅವರ ಮೊಮ್ಮಕ್ಕಳು, ಗ್ರಾಮಸ್ಥರು ಆ ಕ್ಷಣವನ್ನು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.