ಬುಧವಾರ, ಆಗಸ್ಟ್ 10, 2022
24 °C

₹ 60 ಸಾವಿರ ಮೌಲ್ಯದ ಗಾಂಜಾ ಗಿಡ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನರಾಯಪಟ್ಟಣ: ತಾಲ್ಲೂಕಿನ ಹಿರೀಸಾವೆ ಹೋಬಳಿ ದಿಡಗ ತುಮಕೂರು ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಅಂದಾಜು ₹ 60 ಸಾವಿರ ಮೌಲ್ಯದ 4.5 ಕೆ.ಜಿ.ಗಾಂಜಾ ಗಿಡಗಳನ್ನು ಶುಕ್ರವಾರ ವಶ ಪಡಿಸಿಕೊಳ್ಳಲಾಗಿದೆ.

ಗ್ರಾಮದ ನಾಗರಾಜು ಎಂಬುವರ ಜಮೀನಿನಲ್ಲಿ ರಾಗಿ ಮತ್ತು ಮುಸುಕಿನ ಜೋಳ ಬೆಳೆಯ ಮಧ್ಯೆ ಅಲ್ಲಲ್ಲಿ ಗಾಂಜಾ ಬೆಳೆಯಲಾಗಿತ್ತು. ಆರೋಪಿ ನಾಗರಾಜು ತಲೆ ಮರೆಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪನಿರೀಕ್ಷಕ ಎಂ.ಎಚ್.ರಘು, ವಲಯ ಅಬಕಾರಿ ನಿರೀಕ್ಷಕಿ ಎಂ.ಜೆ.ಅನಿತಾ, ಉಪನಿರೀಕ್ಷಕ ಎಚ್.ಎ.ಅಬ್ದುಲ್ ನಿಸಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು