ಬೇಲೂರು: ಆನೆಕಾರ್ಯಪಡೆ ಸಿಬ್ಬಂದಿ ಹೆಚ್ಚಿನ ಗಮನಹರಿಸಿ ಕೆಲಸ ಮಾಡಬೇಕಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಬಿಕ್ಕೋಡಿನ ಸಸ್ಯಕ್ಷೇತ್ರದಲ್ಲಿ ಆನೆಕಾರ್ಯಪಡೆ ಸಿಬ್ಬಂದಿಯೊಂದಿಗೆ ಚರ್ಚಿಸಿ ಅವರು ಮಾತನಾಡಿದರು.

‘ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಬೆಳೆಹಾನಿ, ಪ್ರಾಣಹಾನಿಯಾಗದಂತೆ ತಡೆಯುವ ಕಡೆ ನಿಗಾವಹಿಸಬೇಕು. ನೋವಿನಿಂದ ರೈತರು ಏನೇ ಮಾತನಾಡಿದರೂ ತಾಳ್ಮೆಯಿಂದಿರಬೇಕು. ಪಟಾಕಿ ಇಲ್ಲದಿದ್ದರೆ ಅಧಿಕಾರಿಗಳಿಗೆ ಹೇಳಿ ತರಿಸಿಕೊಳ್ಳಬೇಕು. ಅದನ್ನು ಬಿಟ್ಟು, ರೈತರಿಗೆ ನೀವೆ ಕೊಡಿ ಎಂದು ಹೇಳಬಾರದು. ರೈತರು ಆಕ್ರೋಶಕ್ಕೆ ಒಳಗಾಗದಂತೆ ತಡೆಯುವ ಜವಾಬ್ದಾರಿ ನಿಮ್ಮ ಮೇಲಿದೆ’ ಎಂದರು.

ಸಿಸಿಎಪ್ ಏಡುಕೊಂಡಲ, ಡಿಸಿಎಪ್ ಸೌರಭ್ ಕುಮಾರ್, ಆರ್ಎಫ್ಒ ಯತೀಶ್, ಭೂಮಿಪುತ್ರ ಬೆಳೆಗಾರರ ಸಂಘದ ಅಧ್ಯಕ್ಷ ರೇಣುಕಾನಂದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.