ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು ಪುರಸಭೆ: ಶೇ 83 ಮತದಾನ

Last Updated 28 ಏಪ್ರಿಲ್ 2021, 6:07 IST
ಅಕ್ಷರ ಗಾತ್ರ

ಬೇಲೂರು: ಬೇಲೂರು ಪುರಸಭೆ ಚುನಾವಣೆ ಮಂಗಳವಾರ ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ 83ರಷ್ಟು ಮತದಾನವಾಗಿದೆ.

ಪಟ್ಟಣದ 23 ವಾರ್ಡ್‌ಗಳಿಗೆ ನಡೆದ ಚುನಾವಣೆಯು ಯಾವುದೇ ಅಡ್ಡಿ ಇಲ್ಲದೆ ನಡೆಯಿತು ಬೆಳಿಗ್ಗೆ 7 ಪ್ರಾರಂಭವಾದ ಚುನಾವಣೆಗೆ ಮತದಾರರು ಉತ್ಸಾಹದಿಂದ ಪಾಲ್ಗೊಂಡರು ನಂತರ ಮಧ್ಯಾಹ್ನ ಬಿಸಿಲು ಅಧಿಕವಾದ್ದರಿಂದ ಮತದಾರರ ಸಂಖ್ಯೆ ಕಡಿಮೆಯಾಗಿ ಮತ್ತೆ ಬಿರುಸಿನ ಮತದಾನ ನಡೆಯಿತು.

ಮತದಾರರಿಗೆ ಮಾಸ್ಕ್ ಧರಿಸುವುದು, ಅಂತರ ಕಡ್ಡಾಯವಾಗಿತ್ತು. ಸ್ಯಾನಿಟೈಸರ್ ಬಳಕೆಗೆ ಇಡಲಾಗಿತ್ತು. ಮತಗಟ್ಟೆಯ ಮುಂದೆ ಜನಸಂದಣಿ ಆಗದಂತೆ ಪೊಲೀಸರು ನಿಗಾ ವಹಿಸಿದ್ದರು. ಕೆಲ ವಾರ್ಡ್‌ಗಳ ಮತಗಟ್ಟೆಗಳ ಸಮೀಪ ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.

ಮತಗಟ್ಟೆಯಿಂದ ಅಭ್ಯರ್ಥಿಗಳನ್ನು ಸಾಕಷ್ಟು ದೂರದಲ್ಲಿ ಇರಲು ತಾಕೀತು ಮಾಡುತ್ತಿದ್ದಾರೆ ಎಂದು ಅಭ್ಯರ್ಥಿಗಳು ಪೊಲೀಸರ ನಡುವೆ ವಾಗ್ವಾದ ನಡೆಸಿದರು. ಅಭ್ಯರ್ಥಿಗಳ ಬೆಂಬಲಿಗರು ಮತಗಟ್ಟೆಯಿಂದ ಸಾಕಷ್ಟು ದೂರದಲ್ಲಿ ನಿಂತು ಮತದಾರರ ಮನವೊಲಿಸುತ್ತಿರುವುದು ಅಲ್ಲಲ್ಲಿ ಕಂಡು ಬಂತು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿ.ವೈ.ಎಸ್.ಪಿ ನಾಗೇಶ್ , ವೃತ್ತ ನಿರೀಕ್ಷಕ ಶ್ರೀಕಾಂತ್, ಪಿ.ಎಸ್.ಐ. ಎಸ್.ಜಿ.ಪಾಟೀಲ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT