ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಂಎಂಎಸ್ ಪರೀಕ್ಷೆ: ಐಶ್ವರ್ಯಾ ಅರ್ಹತೆ

Last Updated 11 ಅಕ್ಟೋಬರ್ 2021, 2:05 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಪಟ್ಟಣದ ನವೋದಯ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಐಶ್ವರ್ಯಾ, ಕೇಂದ್ರ
ಮಾನವ ಸಂಪನ್ಮೂಲ ಇಲಾಖೆ ಆಯೋಜಿಸುವ ಎನ್‌ಎಂಎಂಎಸ್ (ನ್ಯಾಷನಲ್ ಮೀನ್ಸ್ ಕಮ್
ಮೆರಿಟ್ ಸ್ಕಾಲರ್ ಶಿಪ್) ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ್ದಾರೆ.

8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎನ್ ಎಂಎಂಎಸ್ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಇದೆ. 2019- 20ನೇ ಸಾಲಿಗೆ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಈಕೆಪರೀಕ್ಷೆ ತೆಗೆದುಕೊಂಡು ಯಶಸ್ಸು ಸಾಧಿಸಿದ್ದಾಳೆ. ಸದ್ಯ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ.

ಗ್ರಾಮೀಣ ಪ್ರತಿಭೆ ಐಶ್ವರ್ಯಾ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ. ಪ್ರತಿ ವರ್ಷ ₹ 12 ಸಾವಿರ ವಿದ್ಯಾರ್ಥಿ ವೇತನ ಬರುತ್ತದೆ. ದ್ವಿತೀಯ ಪಿಯುವರೆಗೆ ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ ಹೊಂದಿದ್ದಾಳೆ.

‌‘ಪರೀಕ್ಷೆ ತೇರ್ಗಡೆಯಾಗಲು ಶಾಲೆಯ ಶಿಕ್ಷಕರು ನೀಡಿದ ಮಾರ್ಗದರ್ಶನ, ತರಬೇತಿ ಸಹಕಾರಿಯಾಯಿತು. ಪೋಷಕರ ಸಹಕಾರ ಮರೆಯುವಂತಿಲ್ಲ. ವಿದ್ಯಾರ್ಥಿ ವೇತನದಲ್ಲಿ ಪಠ್ಯಕ್ಕೆ ಪೂರಕವಾದಪುಸ್ತಕ ಖರೀದಿಸುತ್ತಿ ದ್ದೇನೆ. ಈ ವರ್ಷ ಎನ್‍ಟಿಎಸ್‍ಇ (ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ) ತೆಗೆದುಕೊಳ್ಳುತ್ತೇನೆ. ಅದರಲ್ಲಿ ಅರ್ಹತೆ ಪಡೆದರೆ ಪದವಿವರೆಗೆ ವಿದ್ಯಾರ್ಥಿ ವೇತನ ಬರುತ್ತದೆ. ಪದವಿತೇರ್ಗಡೆಯಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಪೊಲೀಸ್ ಅಧಿಕಾರಿಯಾಗುವ ಆಶಯ ಇದೆ’ ಎಂದು ಐಶ್ವರ್ಯಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT