ಸೋಮವಾರ, ಮಾರ್ಚ್ 27, 2023
29 °C

ಅನೈತಿಕ ಪೊಲೀಸ್‌ ಗಿರಿಗೆ ಅವಕಾಶವಿಲ್ಲ: ಡಿಜಿಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಕಾನೂನು ಭಂಗ ಮಾಡುವುದು ಕಂಡು ಬಂದರೇ ಪೊಲೀಸರಿಗೆ ತಿಳಿಸಬೇಕು. ಅನೈತಿಕ ಪೊಲೀಸ್‌ ಗಿರಿ ಮಾಡಲು ಅವಕಾಶವಿಲ್ಲ’ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸ್ಪಷ್ಟಪಡಿಸಿದರು.

ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾನೂನು ಪ್ರಕಾರವೇ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಅಪರಾಧ ನಡೆಯುತ್ತಿರುವುದು ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ತಾವಾಗಿಯೇ ಕಾನೂನು ಕೈಗೆತ್ತಿಕೊಂಡರೆ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

‘ರಾಜ್ಯದ ಪೊಲೀಸರಿಗೆ ಸರಿಯಾದ ವೇತನ ನೀಡಲಾಗುತ್ತಿದೆ. ಆರೋಗ್ಯ ಭಾಗ್ಯ ಸೇರಿದಂತೆ ಇತರೆ ಹಲವು ನೆರವು ನೀಡಲಾಗುತ್ತಿದೆ. ಪೊಲೀಸ್ ವಸತಿಗೃಹ ಮೇಲ್ದರ್ಜೆಗೇರಿಸುವ ಹಾಗೂ ಪೊಲೀಸರ ಆರೋಗ್ಯ ರಕ್ಷಣೆ ಕುರಿತು ರಾಜ್ಯ ಸರ್ಕಾರ ಹಲವು ನೆರವು ನೀಡುತ್ತಿದೆ’ ಎಂದು ಹೇಳಿದರು.

‘ನಾಡಿನ ಸಮಸ್ತ ಜನರಿಗೆ ಆರೋಗ್ಯ, ನೆಮ್ಮದಿ ಕರುಣಿಸುವಂತೆ ಪ್ರಾರ್ಥಿಸಿದ್ದೇನೆ. ಜಿಲ್ಲಾಡಳಿತ ದೇವಿಯ ದರ್ಶನಕ್ಕೆ ಅಚ್ಚುಕಟ್ಟಾಗಿ ವ್ಯವಸ್ಥೆ ಕೈಗೊಂಡಿದೆ’ ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ
ಬಿ.ಎನ್‌. ನಂದಿನಿ, ಡಿವೈಎಸ್ಪಿ ಉದಯಭಾಸ್ಕರ್, ಸರ್ಕಲ್‌ ಇನ್‌ಸ್ಪೆಕ್ಟರ್‌ ವಸಂತ ಕುಮಾರ್, ಸುರೇಶ್
ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.