ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ ಸ್ಥಿತಿಗೆ ಜನ ಜೀವನ

ಲಕ್‌ಡೌನ್‌ ಸಡಿಲಿಕೆ ಬಳಿಕ ರಸ್ತೆಗಿಳಿದ ವಾಹನಗಳು, ಮಾರುಕಟ್ಟೆಯಲ್ಲಿ ಜನಜಂಗುಳಿ
Last Updated 12 ಜುಲೈ 2021, 13:57 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಲಾಕ್‌ಡೌನ್ ತೆರವುಗೊಂಡ ಬೆನ್ನಲ್ಲೇ ಸೋಮವಾರ ಎಲ್ಲಾ ಚಟುವಟಿಕೆಗಳೂ ಮತ್ತೆ ಪ್ರಾರಂಭಗೊಂಡು ಸಹಜ ಸ್ಥಿತಿಗೆ ಮರಳಿದೆ.

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗದ ಕಾರಣ ಜುಲೈ12ರ ವರೆಗೂನಿರ್ಬಂಧ ವಿಸ್ತರಿಸಲಾಗಿತ್ತು. ಅನ್‌ಲಾಕ್‌ ಹಿನ್ನೆಲೆಯಲ್ಲಿ ಮಾರುಕಟ್ಟೆ, ಶಾಪಿಂಗ್‌ ಮಳಿಗೆಗಳಲ್ಲಿಮತ್ತೆ ಗ್ರಾಹಕರ ಜಂಗುಳಿ ಕಂಡು ಬಂತು.

ದೇವಾಲಯಗಳು, ಮಾಲ್‌ಗಳು, ಈಜುಕೊಳ, ಜಿಮ್ ತರಬೇತಿ ಕೇಂದ್ರ, ಖಾಸಗಿ ಹಾಗೂಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿವೆ. ಬೇಲೂರು, ಹಳೇಬೀಡು,ಶ್ರವಣಬೆಳಗೊಳ ದೇವಾಲಯಗಳು ಮುಂಜಾನೆಯಿಂದ ಬಾಗಿಲು ತೆರೆದಿತ್ತು. ಕೋವಿಡ್‌ಮಾರ್ಗಸೂಚಿಗೆ ಅನುಗುಣವಾಗಿ ಭಕ್ತರು ದೇವರ ದರ್ಶನ ಪಡೆದರು.

ಹೋಟೆಲ್‌ಗಳಲ್ಲಿ ಗ್ರಾಹಕರು ಕುಳಿತು ಊಟ, ಉಪಹಾರ ಸೇವಿಸುತ್ತಿರುವುದು ಕಂಡು ಬಂತು.ಹಲವು ಅಂಗಡಿಗಳು ರಾತ್ರಿ ವರೆಗೂ ವಹಿವಾಟು ನಡೆಸಿದವು. ಬಹುತೇಕ ಎಲ್ಲ ಚಟುವಟಿಕೆಗಳುಸಹಜ ಸ್ಥಿತಿಗೆ ಬಂದಿದೆ.

ನಗರದ ಬಿ.ಎಂ. ರಸ್ತೆ, ಸಾಲಗಾಮೆ ರಸ್ತೆ, ಆರ್‌.ಸಿ. ರಸ್ತೆ, ಹಳೆ ಬಸ್ ನಿಲ್ದಾಣದ ರಸ್ತೆ, ಎನ್‌.ಆರ್‌.ವೃತ್ತದಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಲಾಕ್‌ಡೌನ್‌ ತೆರವು ಗೊಂಡರೂ ಬಸ್‌ ನಿಲ್ದಾಣದಲ್ಲಿಯೇತರಕಾರಿ ಮಾರಾಟ ಮುಂದುವರೆದಿತ್ತು. ಇದರಿಂದ ನಗರ ಬಸ್‌ಗಳ ಸಂಚಾರ ಹಾಗೂ ಜನರಓಡಾಟಕ್ಕೂ ಅಡಚಣೆ ಉಂಟಾಯಿತು.

ಕೆಲವೆಡೆ ಮಾಸ್ಕ್‌ ಧರಿಸದಿರುವುದು, ಅಂತರ ಪಾಲನೆ ನಿಯಮ ಉಲ್ಲಂಘಿಸಿರುವುದು ಕಂಡುಬಂತು.

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಸಂಪೂರ್ಣವಾಗಿ ಕಡಿಮೆಯಾಗದ ಕಾರಣ ಜುಲೈ19ರ ವರೆಗೂ ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆ ವರೆಗೆ ರಾತ್ರಿ ಕರ್ಫ್ಯೂ ವಿಧಿಸಿದ್ದು, ಈಸಂದರ್ಭದಲ್ಲಿ ಸಾರ್ವಜನಿಕ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿರಸ್ತೆಗೆ ಇಳಿಯುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಆರ್‌‌. ಗಿರೀಶ್ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT