ಚನ್ನರಾಯಪಟ್ಟಣ: ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮು ಷಟರ್ ಅನ್ನು ಬುಧವಾರ ರಾತ್ರಿ ಕಬ್ಬಿಣದ ಸಲಾಕೆಯಿಂದ ಮೀಟಿ ಒಳನುಗ್ಗಿದ ಕಳ್ಳರು, 70 ಚೀಲ ರಾಗಿಯನ್ನು ಕಳವು ಮಾಡಿದ್ದಾರೆ.

ಕಳ್ಳರು ಅಂದಾಜು ₹1.46 ಲಕ್ಷ ಮೌಲ್ಯದ ತಲಾ 50 ಕೆ.ಜಿ. ತೂಕ ಇರುವ 70 ಚೀಲ ರಾಗಿ ಮೂಟೆಗಳನ್ನು ಕಳವು ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಗೆ ವಿತರಿಸಲು ರಾಗಿಯನ್ನು ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿತ್ತು.

ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ತಿಂಗಳು 27 ರಂದು ಪಟ್ಟಣದ ಟಿಎಪಿಸಿಎಂಎಸ್ ಗೋದಾಮಿನ ಬೀಗ ಮುರಿದು ರಾಗಿ ಮತ್ತು ಅಕ್ಕಿ ಮೂಟೆಯನ್ನು ಕಳವು ಮಾಡಲಾಗಿತ್ತು. ಇದಾದ 11 ದಿನದಲ್ಲಿ ಇನ್ನೊಂದು ಗೋದಾಮಿನಿಂದ ರಾಗಿ ಕಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.