ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ದರಕ್ಕಿಂತ ಕಡಿಮೆಗೆ ನೋಂದಣಿ: ಕಾಂಗ್ರೆಸ್‌ ಮುಖಂಡ ಆರೋಪ

ಶಾಸಕ ಪ್ರೀತಂ ಜೆ.ಗೌಡ ವಿರುದ್ಧ ಕಾಂಗ್ರೆಸ್‌ ಮುಖಂಡ ಆರೋಪ
Last Updated 4 ಫೆಬ್ರುವರಿ 2021, 6:26 IST
ಅಕ್ಷರ ಗಾತ್ರ

ಹಾಸನ: ‘ಶಾಸಕ ಪ್ರೀತಂ ಜೆ.ಗೌಡ ಅವರು ರಾಜರತ್ನಂ ಮ್ಯಾಚ್‌ ಇಂಡಸ್ಟ್ರಿಸ್‌ಅ‌ನ್ನು ಖರೀದಿಸಿದ್ದು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿಸರ್ಕಾರಿ ಮಾರ್ಗಸೂಚಿ ದರಕ್ಕಿಂತಕಡಿಮೆಗೆನೋಂದಣಿಮಾಡಿಸಿಕೊಂಡಿದ್ದಾರೆ’ ಎಂದು ಕೆಪಿಸಿಸಿ ಸದಸ್ಯ ಎಚ್‌.ಕೆ.ಮಹೇಶ್‌ ಆರೋಪಿಸಿದರು.

‘ಇಂಡಸ್ಟ್ರೀಸ್‌ನ ಮಾರುಕಟ್ಟೆಮೌಲ್ಯ₹ 30 ಕೋಟಿ.ಸರ್ಕಾರಿಮಾರ್ಗಸೂಚಿದರದ ಪ್ರಕಾರ ಇದರ ಮೌಲ್ಯ₹ 15.5 ಕೋಟಿ. ಆದರೆ, ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ತಂದುಕೇವಲ₹7.5 ಕೋಟಿಗೆ ಮೌಲ್ಯಮಾಪನ ಮಾಡಿಸಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಸರ್ಕಾರಿಮಾರ್ಗಸೂಚಿ ದರದ ಪ್ರಕಾರ ಈ ಆಸ್ತಿಯ ನೋಂದಣಿ ಶುಲ್ಕ₹ 1.20 ಕೋಟಿ. ಆದರೆ,₹ 7.5 ಕೋಟಿಗೆ ಮೌಲ್ಯಮಾಪನ ಮಾಡಿಸಿರುವುದರಿಂದ₹ 60 ಲಕ್ಷ ನೋಂದಣಿ ಶುಲ್ಕ ಆಗಿದ್ದು, ಸರ್ಕಾರಕ್ಕೆ₹ 60 ಲಕ್ಷ ವಂಚಿಸಿದ್ದಾರೆ’ ಎಂದರು.

ಈ ಬಗ್ಗೆ ಪ್ರಕ್ರಿಯೆಗಾಗಿಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು.ಆದರೆ, ಅವರು ಲಭ್ಯರಾಗಲಿಲ್ಲ.

‘ಪ್ರೀತಂ ಜೆ.ಗೌಡ ಅವರು ಕಾನೂನಾತ್ಮಕವಾಗಿರಾಜರತ್ನಂ ಮ್ಯಾಚ್‌ ಇಂಡಸ್ಟ್ರೀಸ್‌ ಖರೀದಿಸಿ, ನೋಂದಣಿಮಾಡಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಮುಖಂಡರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದು.ಈ ಬಗ್ಗೆ ಸದ್ಯದಲ್ಲಿಶಾಸಕರೇ ಉತ್ತರ ನೀಡಲಿದ್ದಾರೆ’ ಎಂದು ಬಿಜೆಪಿ ಹಾಸನ ನಗರ ಘಟಕದ ಅಧ್ಯಕ್ಷ ವೇಣುಗೋ‍ಪಾಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT