ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಗ್ಗೇಹಳ್ಳಿ: 4.90 ಲಕ್ಷ ವೆಚ್ಚದಲ್ಲಿ ಕೃಷಿ ಪತ್ತಿನ ಕಟ್ಟಡ ನವೀಕರಣ

Published : 6 ಆಗಸ್ಟ್ 2024, 13:58 IST
Last Updated : 6 ಆಗಸ್ಟ್ 2024, 13:58 IST
ಫಾಲೋ ಮಾಡಿ
Comments

ನುಗ್ಗೇಹಳ್ಳಿ: ಹೋಬಳಿಯ ಕಲ್ಕೆರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡವನ್ನು 4.90 ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ ಎಂದು ಶಾಸಕ ಸಿಎನ್ ಬಾಲಕೃಷ್ಣ ತಿಳಿಸಿದರು.

ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನವೀಕರಣಗೊಂಡಿದ್ದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಕಲ್ಕೆರೆ ಕೃಷಿ ಪತ್ತಿನ ಮೂಲಕ ಸಾವಿರಾರು ಶೇರುದಾರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ ತಾಲೂಕಿನಲ್ಲಿ ಶಿಕ್ಷಣ ಆರೋಗ್ಯ ಹೈನುಗಾರಿಕೆ ನೀರಾವರಿ ಸೇರಿದಂತೆ ಅನೇಕ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಕಲ್ಕೆರೆ ಕೃಷಿ ಪತ್ತಿನ ಕಟ್ಟಡ ಹಳೆಯ ಕಟ್ಟಡವಾಗಿದ್ದು ನವೀಕರಣ ಮಾಡಲು ಸಂಘದ ಸದಸ್ಯರು ಅನೇಕ ವರ್ಷಗಳಿಂದ ಸಹಾಯ ಮಾಡುತ್ತಿದ್ದರು ಈ ಹಿನ್ನೆಲೆಯಲ್ಲಿ ನವೀಕರಣ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು ಗುಣಮಟ್ಟದಲ್ಲಿ ಕಟ್ಟಡವನ್ನು ನವೀಕರಣ ಮಾಡಲಾಗಿದೆ ಕಲ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಗ್ರಾಮಗಳ ಅಭಿವೃದ್ಧಿಗೆ ತಮ್ಮ ಅವಧಿಯಲ್ಲಿ ಹೆಚ್ಚಿನ ಅನುದಾನ ನೀಡಿರುವುದಾಗಿ ತಿಳಿಸಿದರು.

ಕೃಷಿ ಪತ್ತಿನ ಅಧ್ಯಕ್ಷೆ ಕೆ.ಎನ್. ಭಾಗ್ಯಮ್ಮ ನಾಗೇಗೌಡ, ಉಪಾಧ್ಯಕ್ಷೆ ಪುಷ್ಪ ರಮೇಶ್, ಕಾರ್ಯನಿರ್ವಣಾಧಿಕಾರಿ ಶರ್ಮ, ನಿರ್ದೇಶಕರಾದ ಗೋಪಾಲಗೌಡ, ಹೊಂಬೆಗೌಡ, ಮಂಜೇಗೌಡ, ಮರಿಗೌಡ, ಡಿ.ಸಿ. ರಮೇಶ್, ರಂಗಮ್ಮ ಮಂಜೇಗೌಡ, ಎಚ್. ಎಂ. ಸಂತೋಷ್ ಕುಮಾರ್, ಈ. ಶಿವಣ್ಣ, ಸುಬ್ಬ ಶೆಟ್ಟಿ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್.ಆರ್. ಮಧು, ಮುಖಂಡರಾದ ಆನಂದ್, ಕಲ್ಕೆರೆ ಅಶೋಕ್, ಬೈರೇಗೌಡ , ಕುಮಾರ್, ಕೃಷಿ ಪತ್ತಿನ ಲೆಕ್ಕಪರಿಶೋಧಕಿ ಶಕುಂತಲಾ, ಮಾರಾಟ ಗುಮಾಸ್ತ ಪ್ರಮೋದ್, ಸಹಾಯಕ ಜಗದೀಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT