ಸೋಮವಾರ, ಆಗಸ್ಟ್ 15, 2022
20 °C

14 ಅಡಿಯ ಕಾಳಿಂಗ ಸರ್ಪ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆತ್ತೂರು: ಹೋಬಳಿಯ ಯರಗಳ್ಳಿ ಗ್ರಾಮದಲ್ಲಿ ಭಾರಿ ಗಾತ್ರದ 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಲಾಯಿತು.

ಗ್ರಾಮದ ದೇವರಾಜ ಅವರು ತಮ್ಮ ಏಲಕ್ಕಿ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರಿಗುವಾಗ ತಮ್ಮ ಹಂಚಿನ ಮನೆಯ ಚಾವಣಿಯಲ್ಲಿ ಹಾವು ಕಾಣಿಸಿಕೊಂಡಿದೆ. ಆಗ ಜನ ಸೇರಿದರು. ದೊಡ್ಡ ಹಾವು ನೋಡಿದ ಜನ ಆತಂಕಗೊಂಡಿದ್ದರು.

ಆಗ ಕೆಲವರು ಸಕಲೇಶಪುರದ ಉರಗ ಪ್ರೇಮಿ ಮಹಮ್ಮದ್ ಪರಾನ್‌ಗೆ ಪೋನ್ ಮಾಡಿ  ಕರೆಯಿಸಿದರು. ಸುಮಾರು 4 ಘಂಟೆಗೂ ಹೆಚ್ಚು ಹೊತ್ತು ಕಾರ್ಯಾಚರಣೆ ನಡೆಸಿ ಸುಮಾರು 14 ಅಡಿ ಉದ್ದ ಹಾಗೂ 12 ಕೆ.ಜಿ ತೂಕವಿದ್ದ ಕಾಳಿಂಗ ಸರ್ಪವನ್ನು ಹಿಡಿದು ಬಿಸಲೆ ರಕ್ಷಿತಾರಣ್ಯಕ್ಕೆ ಬಿಡಲಾಯಿತು.

ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ನರಸಿಂಹಮೂರ್ತಿ, ವಿಜಯಕುಮಾರ್ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು