ಸಕಲೇಶಪುರ ತಾಲ್ಲೂಕಿನ ಹಾಲೇಬೇಲೂರು–ಹೊಂಕರವಳ್ಳಿ ನಡುವಿನ ರಸ್ತೆ ಡಾಂಬರು ಕಿತ್ತು ಬಂದಿರುವುದು
ಡಾಂಬರೀಕರಣ ಮಾಡಿ ಒಂದೂವರೆ ತಿಂಗಳಲ್ಲಿ ಹಾಳಾಗಿದೆ. ಒಂದು ತಿಂಗಳು ಹೀಗೆಯೇ ಮಳೆ ಬಂದರೆ ರಸ್ತೆಗೆ ಹಾಕಿರುವ ಡಾಂಬರು ಮೇಲೆ ಎದ್ದು ಬರುತ್ತದೆ. ಗುತ್ತಿಗೆದಾರರಿಂದ ಪುನಃ ರಸ್ತೆ ನಿರ್ಮಾಣ ಮಾಡಿಸಬೇಕು
ಪ್ರಕಾಶ್ ಅಧ್ಯಕ್ಷ ಕುನಿಗನಹಳ್ಳಿ ಗ್ರಾ.ಪಂ.
ಈ ಬಾರಿ ಮುಂಗಾರು ಜೂನ್ ಮೊದಲ ವಾರದಿಂದಲೇ ಆರಂಭವಾಗಿದೆ. ಕೆಲವೆಡೆ ಡಾಂಬರು ಕಿತ್ತಿದೆ. ಗುತ್ತಿಗೆದಾರರಿಗೆ 2 ವರ್ಷ ನಿರ್ವಹಣೆ ಜವಾಬ್ದಾರಿ ಇದೆ. ಮಳೆ ನಿಂತ ಕೂಡಲೇ ಗುಣಮಟ್ಟದಲ್ಲಿ ಡಾಂಬರೀಕಣ ಮಾಡಿಸಲಾಗುವುದು.
ಹನುಮಂತರೆಡ್ಡಿ ಎಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ