ಸೇವೆಗೆ ಸಮಯ ಮೀಸಲಿಡಿ

7
ಶಾಸಕ ಪ್ರೀತಂ ಜೆ.ಗೌಡ ಸಲಹೆ

ಸೇವೆಗೆ ಸಮಯ ಮೀಸಲಿಡಿ

Published:
Updated:
Deccan Herald

ಹಾಸನ : ಶಿಕ್ಷಣ ಜೀವನದ ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿಗಳು ದಿನದಲ್ಲಿ ಕೆಲ ಸಮಯವನ್ನು ಸೇವೆಗೆ ಮೀಸಲಿಡಬೇಕು ಎಂದು ಶಾಸಕ ಪ್ರೀತಂ ಜೆ.ಗೌಡ ಸಲಹೆ ನೀಡಿದರು.

ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜ್ಞಾನಧಾರೆ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೇಡವಾದ ವಿಚಾರದ ಕಡೆ ಗಮನ ಹರಿಸದೆ ಓದಿನಲ್ಲಿ ಆಸಕ್ತಿ ಹೊಂದಬೇಕು. ಯಾವುದೇ ಪಠ್ಯ ಆಯ್ಕೆ ಮಾಡಿಕೊಂಡರೂ ಇಷ್ಟಪಟ್ಟು ಓದಬೇಕು. ಪರೀಕ್ಷೆಗಾಗಿ ಓದದೇ ವಿಷಯ ಅರ್ಥ ಮಾಡಿಕೊಳ್ಳಿ ಹಾಗೂ ಗೊತ್ತಿಲ್ಲದಿದ್ದರೆ ಗುರುಗಳಿಂದ ಕೇಳಿ ತಿಳಿದುಕೊಳ್ಳಬೇಕು. ಸಮಾಜಕ್ಕೆ ಒಳಿತಾಗುವ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು.

ಉತ್ತಮ ದೇಶ ಕಟ್ಟಲು ಒಳ್ಳೆಯ ಪ್ರಜೆ ಬೇಕು. ವಿವಿಧ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆಯಿಂದ ಇಂದು ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ. ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು ಎಂದು ನುಡಿದರು.
ಜ್ಞಾನಧಾರೆ ಕಾಲೇಜಿನ ಜವರೇಗೌಡ ಮಾತನಾಡಿ, ವಿದ್ಯಾರ್ಥಿಗಳು ಗುರು-ಹಿರಿಯರಿಗೆ ಗೌರವ ಕೊಡಬೇಕು. ಸಮಯ ವ್ಯರ್ಥ ಮಾಡದೆ ಓದಿನ ಕಡೆ ಗಮನ ಹರಿಸಬೇಕು ಎಂದರು.

ಲಯನ್ಸ್ ಸೇವಾ ಸಂಸ್ಥೆ ಸದಸ್ಯ ಚಂದ್ರೇಗೌಡ, ಸಂಸ್ಥೆ ಕಾರ್ಯದರ್ಶಿ ಪ್ರಕಾಶ್, ಐಟಿಐ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಯೋಗೀಶ್, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ನಂದೀಶ್, ವಿದ್ಯಾಸಿರಿ ಶಿಕ್ಷಣ ಸಂಸ್ಥೆ ನಿರ್ದೇಶಕ ರಂಗೇಗೌಡ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಯೋಗಶ್ರೀ, ಭೂಮಿಕ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !