ಭಾನುವಾರ, ಫೆಬ್ರವರಿ 28, 2021
20 °C

ಗ್ರಾ.ಪಂ. ಎದುರು ವಾಮಾಚಾರದ ಶಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಳೇಬೀಡು: ಅಡಗೂರು ಗ್ರಾಮ ಪಂಚಾಯಿತಿ ಕಚೇರಿಯ ಬಾಗಲಿನ ಬಳಿ ಮಣ್ಣಿನಡಿಯಲ್ಲಿ ಬುಧವಾರ ಪೂಜೆ ಮಾಡಿದ ತೆಂಗಿನ ದೊರಕಿದೆ. ವಾಮಚಾರ ಮಾಡಿ ಕಾಯಿಯನ್ನು ಹೂತಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಮಣ್ಣಿನಡಿ ಹೂತಿದ್ದ ತೆಂಗಿನಕಾಯಿಗೆ ಕೆಂಪು ಹಾಗೂ ಕಪ್ಪು ಬಣ್ಣದ ದಾರ ಸುತ್ತಿ, ಕುಂಕುಮ ಹಚ್ಚಲಾಗಿದೆ. ತೆಂಗಿನಕಾಯಿ ಮೊಳಕೆ ಒಡೆದು ಚಿಗುರುತ್ತಿತ್ತು. ನೌಕರರು ಸಸಿಗೆ ಪ್ರತಿದಿನ ನೀರು ಹಾಕುತ್ತಿದ್ದರು. ಚಿಗುರು ತೆಂಗಿನ ಗರಿಯಂತೆ ಕಾಣುತ್ತಿದೆ ಎಂದು ಸ್ಥಳೀಯರು ಅಂದಾಜಿಸಿ ಕುತೂಹಲದಿಂದ ಮಣ್ಣಿನಿಂದ ತೆಗೆದಾಗ ಪೂಜೆ ಮಾಡಿ, ದಾರ ಸುತ್ತಿದ ತೆಂಗಿನಕಾಯಿ ದೊರಕಿದೆ.

ಮೌಢ್ಯದಿಂದ ಕಚೇರಿ ಬಳಿ ವಿಶೇಷವಾಗಿ ಪೂಜಿಸಿ ತೆಂಗಿನ ಕಾಯಿ ಹೂತಿರಬಹುದು. ಮೌಢ್ಯದತ್ತ ಜನರು ಗಮನಹರಿಸಬೇಡಿ. ನೌಕರರು ಹಾಗೂ ಗ್ರಾಮಸ್ಥರು ಭಯಪಡಬಾರದು ಎಂದು ಪಿಡಿಒ ಕೃಷ್ಣಪ್ಪ ಪೂಜಾರ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು