ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: 20 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಗಳ ಬಿತ್ತನೆ

Published 8 ಜೂನ್ 2023, 4:36 IST
Last Updated 8 ಜೂನ್ 2023, 4:36 IST
ಅಕ್ಷರ ಗಾತ್ರ

ವಿಶೇಷ ವರದಿ

ಹಾಸನ: ಕಳೆದ ಬಾರಿಗೆ ಹೋಲಿಸಿದರೆ, ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 5 ರಷ್ಟು ಅಧಿಕ ಮಳೆಯಾಗಿದೆ. ಇದರಿಂದ ಕೃಷಿ ಚಟುವಟಿಕೆಗಳು ನಿಧಾನವಾಗಿ ಗರಿಗೆದರುತ್ತಿವೆ. ಕೃಷಿ ಇಲಾಖೆಯು ಅಗತ್ಯ ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಮಾಡಿಕೊಂಡಿದೆ.

ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 114.2 ಸೇಂ.ಮೀ.ನಷ್ಟಿದ್ದು, ಜನವರಿಯಿಂದ ಮೇ ಅಂತ್ಯದವರೆಗೆ 16.8 ಸೆಂ.ಮೀ. ವಾಡಿಕೆ ಮಳೆ ಇದೆ. ಆದರೆ, ಈ ವರ್ಷ 17.7 ಸೆಂ.ಮೀ. ಮಳೆಯಾಗಿದ್ದು, ಶೇ 5 ರಷ್ಟು ಅಧಿಕ ಮಳೆಯಾಗಿರುತ್ತದೆ. ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಅಲಸಂದೆ, ಹೈಬ್ರಿಡ್ ಜೋಳ, ಸೂರ್ಯಕಾಂತಿ, ತಂಬಾಕು, ಭತ್ತ, ರಾಗಿ ಮುಸುಕಿನ ಜೋಳದ ಬೆಳೆಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ.

ಕೃಷಿಕರೂ ಈಗಾಗಲೇ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದು, ಕೊಳವೆಬಾವಿ ನೀರು ಹೊಂದಿರುವ ಕೆಲವರು ಈಗಾಗಲೇ ಬಿತ್ತನೆ ಮಾಡಿದ್ದಾರೆ. ಆದರೆ, ಇನ್ನೂ ಕೆಲವರು ಮಳೆಯನ್ನೇ ಅವಲಂಬಿಸಿದ್ದು, ಮಳೆಯನ್ನು ಆಧರಿಸಿ, ಬಿತ್ತನೆಗೆ ಚಿಂತನೆ ನಡೆಸಿದ್ದಾರೆ.

ಜಿಲ್ಲೆಯ ಬೆಳೆ ಪದ್ಧತಿ ಆಧರಿಸಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 37,685 ಟನ್ ರಸಗೊಬ್ಬರ ಬೇಡಿಕೆಯಿದ್ದು, ಬೇಡಿಕೆಯಂತೆ ರಸಗೊಬ್ಬರ ಸರಬರಾಜಾಗಿ 34,761 ಟನ್ ರಸಗೊಬ್ಬರ ವಿತರಣೆಯಾಗಿದೆ. ಪ್ರಸ್ತುತ ಯೂರಿಯಾ 11,359 ಟನ್, ಡಿ.ಎ.ಪಿ 6,117 ಟನ್, ಎಂ.ಒ.ಪಿ. 2,042 ಟನ್, ಎನ್.ಪಿ.ಕೆ. ಕಾಂಪ್ಲೆಕ್ಸ್ 20,942 ಟನ್, ಎಸ್.ಎಸ್.ಪಿ. 1,023 ಟನ್ ಸೇರಿದಂತೆ ಒಟ್ಟಾರೆ 41,481 ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿ ಮುಂಗಾರು ಪೂರ್ವ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಚುರುಕಾಗಿಲ್ಲ. ನೀರಾವರಿ ಸೌಲಭ್ಯ ಇರುವ ಕೆಲವರು ಈಗಾಗಲೇ ಬಿತ್ತನೆ ಮಾಡಿದ್ದಾರೆ.
ಶಿವಶಂಕರಪ್ಪ, ರೈತ

ಜಿಲ್ಲೆಯ ಎಲ್ಲ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯತಿ ದರದಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದ್ದು, ಸಾಮಾನ್ಯ ವರ್ಗದ ರೈತರಿಗೆ ಶೇ 50 ರ ರಿಯಾಯತಿ ದರದಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ 75 ಸಹಾಯಧನದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ಕೋಡ್‌ ಕ್ಯೂಆರ್ ಕೋಡ್‌ ಗೂಗಲ್‌ ಪೇ ಫೋನ್‌ಪೇ ಮೂಲಕ ರೈತರು ರೈತರ ವಂತಿಕೆ ಪಾವತಿಸಬಹುದಾಗಿದೆ.
ಡಾ. ರಾಜಸುಲೋಚನಾ ಎಂ.ಎನ್., ಜಂಟಿ ಕೃಷಿ ನಿರ್ದೇಶಕಿ

ರೈತ ಸಂಪರ್ಕ ಕೇಂದ್ರಗಳಲ್ಲಿ 2,416 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ರೈತರು ತಮ್ಮ ಆಧಾರ್ ಕಾರ್ಡ್‌ ಮತ್ತು ಎಫ್‌ಐಡಿ ದಾಖಲಾತಿಗಳನ್ನು ನೀಡಿ ಬಿತ್ತನೆ ಬೀಜಗಳನ್ನು ಪಡೆಯಬಹುದಾಗಿದೆ. ಬಿತ್ತನೆ ಬೀಜ ಹಾಗೂ ಇತರೆ ಕೃಷಿ ಪರಿಕರಗಳನ್ನು ಕ್ಯೂಆರ್‌ ಕೋಡ್‌ ಅಳವಡಿಸುವ ಮೂಲಕ ವಿತರಿಸಲಾಗುತ್ತಿದೆ.

ಬಿತ್ತನೆಯಾಗಿರುವ ಪ್ರದೇಶ (ಹೆಕ್ಟೇರ್‌ನಲ್ಲಿ) ಬೆಳೆ; ಪ್ರದೇಶ ಹೆಸರು; 3048 ಉದ್ದು; 520 ಅಲಸಂದೆ; 3933 ತಂಬಾಕು ;7375 ಮುಸುಕಿನ ಜೋಳ ;4202 ಎಳ್ಳು ;118 ನೆಲಗಡಲೆ ;55 ಕಬ್ಬು ;505 ಹತ್ತಿ ;180 ಒಟ್ಟು ;20028

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT